ಮಲೇಬೆನ್ನೂರು, ಜೂ. 1- ತಂಬಾಕು ಉತ್ಪನ್ನಗಳಿಗೆ ಜನರು ಮಾರು ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿ ರುವುದು ವಿಷಾದನೀಯ ಎಂದು ಧರ್ಮಸ್ಥಳ ಯೋಜ ನೆಯ ಅಖಿಲ ಕರ್ನಾಟಕ ಜನ ಜಾಗೃತಿ ಸಮಿತಿ ಸದಸ್ಯ ಜಿ. ಮಂಜುನಾಥ್ ಪಟೇಲ್ ಕಳವಳ ವ್ಯಕ್ತಪಡಿಸಿದರು.
ಅವರು ಬುಧವಾರ ಪಟ್ಟಣದ ಕಾಳಿಕಾದೇವಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಟ್ಟೂರು ವಲಯದಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು, ಬೀಡಿ, ಸಿಗರೇಟ್, ಮದ್ಯ, ಗುಟ್ಕಾ, ಗಾಂಜಾ ಮತ್ತಿತರೆೆ ಮಾದಕ ವಸ್ತು ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ತಂಬಾಕಿನಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಮಾತನಾಡಿ, ನಮ್ಮ ಯೋಜನೆ ನಾಗರಿಕ ಸಮಾಜ ಹಾಗೂ ದೇಶದ ಉನ್ನತಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದೆ. ಮದ್ಯವರ್ಜನೆ ಶಿಬಿರ ಆಯೋಜಿಸಿ ಕ್ರಾಂತಿ ಮಾಡಿದೆ ಎಂದು ಹೇಳಿದರು.
ಎಸ್.ಬಿ.ಕೆ.ಎಂ. ಶಾಲೆಯ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಪಶು ವೈದ್ಯಾಧಿಕಾರಿ ಡಾ ಬಾಲಚಂದ್ರ ಅವರು ವಿಶೇಷ ಉಪನ್ಯಾಸ ನೀಡಿದರು. ನಿಟ್ಟೂರು ವಲಯ ಮೇಲ್ವಿಚಾರಕ ಚಂದ್ರಪ್ಪ ಕೊರಕಲಿ, ಜ್ಞಾನ ವಿಕಾಸ ಸಂಯೋಜನಾಧಿಕಾರಿ ಸವಿತಾ, ಕೃಷಿ ಮೇಲ್ವಿಚಾರಕ ಗಂಗಾಧರ್ ಸೇರಿದಂತೆ ಸ್ವ ಸಹಾಯ ಸಂಘಗಳ 150 ಸದಸ್ಯರು ಈ ವೇಳೆ ಇದ್ದರು.