ದೇಶ ನಿರ್ಮಾಣದಲ್ಲಿ ಎನ್ನೆಸ್ಸೆಸ್ ಪಾತ್ರ ಮುಖ್ಯ

ದೇಶ ನಿರ್ಮಾಣದಲ್ಲಿ ಎನ್ನೆಸ್ಸೆಸ್ ಪಾತ್ರ ಮುಖ್ಯ

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ. ರಂಗನಾಥ್ ಅಭಿಮತ

ಸಿರಿಗೆರೆ, ಮೇ 28- ರಾಷ್ಟ್ರೀಯ ಸೇವಾ ಯೋಜನೆಯು ದೇಶ ನಿರ್ಮಾಣದಲ್ಲಿ ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ. ರಂಗನಾಥ್ ಹೇಳಿದರು.

ಸಿರಿಗೆರೆ ಸಮೀಪದ ಜಮ್ಮೇನಹಳ್ಳಿಯಲ್ಲಿ ಎಂ. ಬಸವಯ್ಯ ವಸತಿ ಪದವಿ ಕಾಲೇಜಿನ ವತಿಯಿಂದ ಆಯೋ ಜಿಸಿರುವ ವಾರ್ಷಿಕ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಗಳಲ್ಲಿ ಮಾನವೀಯ ಮೌಲ್ಯಗಳನ್ನು ಎನ್ನೆಸ್ಸೆಸ್ ಬೆಳೆಸುವುದ ಲ್ಲದೇ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.

ಇಂದಿನ ವಿದ್ಯಾರ್ಥಿ ಸಮುದಾಯ ತಮ್ಮಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದ್ದು, ಅವುಗಳು ಅಂತರ್ಗತವಾಗಲು ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಮುನ್ನುಡಿಯಾಗುತ್ತವೆ. ಶಿಬಿರಾರ್ಥಿಗಳು ಹಳ್ಳಿಗಳ ಸ್ವಚ್ಛತೆ, ನೈರ್ಮಲ್ಯ, ಗ್ರಾಮ ವಾಸಿಗಳ ಆರೋಗ್ಯ ಕುರಿತಂತೆ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಬೇಕೆಂದು ಅವರು ಕಿವಿಮಾತು ಹೇಳಿದರು.

ಶಿಬಿರದ ಅಧ್ಯಕ್ಷರಾದ ಪ್ರಾಚಾರ್ಯ ಶಿವಬಸವ ಕೂಟಗಿ ಮಾತನಾಡಿ, ವಿದ್ಯಾರ್ಥಿ ಸಮುದಾಯವು ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕಿದೆ. ಅಂತಹ ಶಿಸ್ತು ಮೂಡಲು ಈ ವಾರ್ಷಿಕ ಶಿಬಿರ ಸಹಕಾರಿಯಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಶಿಕ್ಷಕರಾದ ನಾರಪ್ಪ ಮಾತನಾಡಿ, ನಮ್ಮ ಹಳ್ಳಿಗೆ ಶಿಬಿರ ಬಂದದ್ದು ವರದಾನವಾಗಿದ್ದು, ಗ್ರಾಮದ ಅಭಿವೃದ್ಧಿ ಹಾಗೂ ಸ್ವಚ್ಛತೆ ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಜೀವನೋತ್ಸಾಹ ತುಂಬುತ್ತದೆಯೆಂದರು.

ಶಿಬಿರಾಧಿಕಾರಿ ಎಸ್. ಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಾದೇವಪ್ಪ, ಓಂಕಾರಪ್ಪ, ಸಹ ಶಿಬಿರಾಧಿಕಾರಿ ಆರ್.ಡಿ. ಬಿಂದು, ಉಪನ್ಯಾಸಕರಾದ ಪ್ರಿಯಾ, ರಂಜಿತಾ, ಅನ್ನಪೂರ್ಣ, ಗೀತಾಂಜಲಿ, ಸುಷ್ಮಾ ಉಪಸ್ಥಿತರಿದ್ದರು. ಉಪನ್ಯಾಸಕ ಕೃಷ್ಣಮೂರ್ತಿ ಸ್ವಾಗತಿಸಿದರು. ರಮೇಶ್ ವಂದಿಸಿದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

error: Content is protected !!