ಹರಪನಹಳ್ಳಿ, ಮೇ 25- ನೂತನ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರಿಗೆ ಪಟ್ಟಣದ ವಿವಿಧ ಕಡೆಗಳಲ್ಲಿ ಕಾರ್ಯ ಕರ್ತರು, ಅಭಿಮಾನಿಗಳು, ಸಂಘ-ಸಂಸ್ಥೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂತು.
ಸ್ಥಳೀಯ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಕಾರ್ಯಕರ್ತರು, ಅಭಿಮಾನಿಗಳು, ವಿವಿಧ ಇಲಾಖೆಯ ನೌಕರರು, ಗೌರವಿಸಿ ಸನ್ಮಾನಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಅಂಗವಿಕಲರ ಭವನದಲ್ಲಿ ವಿಕಲಚೇತನರ ಸಂಘದಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಪಿ.ಲತಾ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್, ಎಂಆರ್‍ಡಬ್ಲೂ ಧನರಾಜ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಮಠ, ಮುಖಂಡರಾದ ಬಿ.ಕೆ. ಪ್ರಕಾಶ್, ಎಂ.ವಿ.ಅಂಜಿನಪ್ಪ, ಟಿ. ವೆಂಕಟೇಶ, ಗಣೇಶ, ಗೊಂಗಡಿ ನಾಗರಾಜ, ಲಾಟಿ ದಾದಾಪೀರ್, ಟಿ. ಉಮಾಕಾಂತ, ಬಿ. ಅಂಜಿನಪ್ಪ, ಕಂಚಿಕೇರಿ ಜಯಲಕ್ಷ್ಮಿ, ಲಕ್ಷ್ಮಿ ಚಂದ್ರಶೇಖರ, ಉಮಾಶಂಕರ್, ಗುಂಡಗತ್ತಿ ನೇತ್ರಾವತಿ, ಕವಿತಾ ಸುರೇಶ್, ಚಂದ್ರಪ್ಪ, ರಾಮಪ್ಪ, ಮತ್ತೂರು ಬಸವರಾಜ, ನೀಲಪ್ಪ, ರೇವಣ್ಯನಾಯ್ಕ, ಪ್ರಸಾದ ಕವಾಡಿ, ಹರಿಯಮ್ಮನಹಳ್ಳಿ ಶಿವರಾಜ, ತೆಲಿಗಿ ಕೆ. ಯೋಗಿಶ, ಜಗದೀಶ, ಸುಮಾ, ಉಪ್ಪಾರ ಹನುಮಂತಪ್ಪ, ಜಿ.ಬಿ.ಟಿ. ಮಹೇಶ, ಇಬ್ರಾಹಿಂ, ಟಿ. ಮಂಜುನಾಥ ಸೇರಿದಂತೆ ಇತರರು ಇದ್ದರು.