`ನನ್ನ ಲೈಫ್‌ – ನನ್ನ ಸ್ವಚ್ಛ ನಗರ’ ಅಭಿಯಾನಕ್ಕೆ ಚಾಲನೆ

`ನನ್ನ ಲೈಫ್‌ – ನನ್ನ ಸ್ವಚ್ಛ ನಗರ’ ಅಭಿಯಾನಕ್ಕೆ ಚಾಲನೆ

ಮಲೇಬೆನ್ನೂರು, ಮೇ 21- ಇಲ್ಲಿನ ಪುರಸಭೆ ವತಿಯಿಂದ `ನನ್ನ ಲೈಫ್‌ – ನನ್ನ ಸ್ವಚ್ಛ ನಗರ’ ಎಂಬ ವಿನೂತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸ್ವಚ್ಛ ಭಾರತ ಅಭಿಯಾನ 2.0 ಕಾರ್ಯಕ್ರಮದಡಿ ದೇಶಾದ್ಯಂತ ನಗರ ಪಟ್ಟಣಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಪ್ಲಾಸ್ಟಿಕ್‌ ಚೀಲ, ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಆಟಿಕೆ ವಸ್ತುಗಳು, ಬಳಸಿದ ಬಟ್ಟೆಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕ ಹಾಗೂ ಎಲೆಕ್ಟ್ರಾನಿಕ್‌ ವಸ್ತುಗಳಂತಹ 6 ಬಗೆಯ ನವೀಕರಿಸಿ, ಮರುಬಳಸಬಹುದಾದ ವಸ್ತುಗಳನ್ನು ಮತ್ತು ಉತ್ಪಾದನೆ ರಕ್ಷಿಸುವ ಉದ್ದೇಶದಿಂದ ಜೂನ್‌ 5 ರವರೆಗೆ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಪರಿಸರ ಇಂಜಿನಿಯರ್‌ ಉಮೇಶ್‌ ತಿಳಿಸಿದರು. ತಮ್ಮ ಮನೆಯಲ್ಲಿನ ತ್ಯಾಜ್ಯ ನೀಡಿ, ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಸುಸ್ಥಿರ ಜೀವನ ಪದ್ಧತಿ ಅಳವಡಿಸಿಕೊಂಡು ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬಹುದೆಂದು ಉಮೇಶ್ ಹೇಳಿದರು.

ಪುರಸಭೆ ಸದಸ್ಯರಾದ ಖಲೀಲ್‌, ನಯಾಜ್‌, ಷಾ ಅಬ್ರಾರ್, ಪಿ.ಆರ್‌. ರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!