ಅರುಣಕುಮಾರಗೆ ಧೈರ್ಯ ತುಂಬಿದ ಕೆ.ಬಿ ಕೋಳಿವಾಡ

ಅರುಣಕುಮಾರಗೆ ಧೈರ್ಯ ತುಂಬಿದ ಕೆ.ಬಿ ಕೋಳಿವಾಡ

ರಾಣೇಬೆ ನ್ನೂರು, ಮೇ 16- ಚುನಾವಣೆ ಯಲ್ಲಿ ಸೋಲು-ಗೆಲುವು ಸಹಜ. ಎರಡನ್ನೂ ಸಮನಾಗಿ ಸ್ವೀಕರಿಸ ಬೇಕು ಎಂದು ಮಾಜಿ ಸಭಾಪತಿ ಕೆ.ಬಿ. ಕೋಳಿವಾಡರು ತಮ್ಮ ಮಗ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶರ ನೇರ ಪ್ರತಿಸ್ಪರ್ಧಿಯಾಗಿ ಪರಾಜಿತ ಗೊಂಡ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರ ಮನೆಗೆ ತೆರಳಿ ಧೈರ್ಯಯ ತುಂಬಿದರು.

ನಾನು 11 ಚುನಾವಣೆಗಳನ್ನು ಎದುರಿಸಿದ್ದೇನೆ. 6 ಚುನಾವಣೆಗಳಲ್ಲಿ ಜನರು ನನ್ನನ್ನು ತಿರಸ್ಕರಿಸಿದರು. 5 ಬಾರಿ ಆಶೀರ್ವದಿಸಿ ಜಯ ತಂದು ಕೊಟ್ಟರು. ಅವರ ಪ್ರೀತಿ ಹೆಚ್ಚಾದರೆ ಗೆಲ್ತೇವೆ. ಕಡಿಮೆ ಆದರೆ ಸೋಲ್ತೇವೆ. ಅವರ ಪ್ರೀತಿ ಗಳಿಸುವ ಪ್ರಯತ್ನದಲ್ಲಿ ನಾವಿರಬೇಕು. ಧೃತಿಗೆಡಬಾರದು ಎಂದು ಕೋಳಿವಾಡರು ಹೇಳಿದರು.

ಮುಂದೆ ಬರುವ ಒಳ್ಳೆಯ ದಿನಗಳಿಗೆ ಕಾಯಬೇಕು. ಸಂಘ ಟಿತರಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಬರುವ ದಿನಗ ಳಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಕೆ.ಬಿ. ಕೋಳಿವಾಡರು ಹರಸಿದರು. ಈ ಸಂದರ್ಭದಲ್ಲಿ ಅರುಣಕುಮಾರ ಪತ್ನಿ, ಜಿ.ಪಂ. ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಬಿಜೆಪಿ ಮುಖಂಡ ರಾದ ಸಿದ್ದಣ್ಣ ಚಿಕ್ಕಬಿದರಿ, ಶಿವಕುಮಾರ ಮತ್ತಿತರರಿದ್ದರು.