ಸಮಯದ ಕೊರತೆ, ಅಲ್ಪಮತಗಳ ಅಂತರದಲ್ಲಿ ಸೋಲು

ಸಮಯದ ಕೊರತೆ, ಅಲ್ಪಮತಗಳ ಅಂತರದಲ್ಲಿ ಸೋಲು

ಹರಿಹರ, ಮೇ 14 – ನನಗೆ ಕೊನೆಯ ಘಳಿಗೆಯಲ್ಲಿ ಟಿಕೆಟ್ ದೊರೆತಿದ್ದರಿಂದ, ಪ್ರಚಾರ ಮಾಡು ವುದಕ್ಕೆ ಕಡಿಮೆ ಸಮಯ ಸಿಕ್ಕ ಪರಿಣಾಮ ನಾನು ಅಲ್ಪ ಮತಗಳ ಅಂತರದಿಂದ ಸೋಲುವುದಕ್ಕೆ ಕಾರಣವಾಯಿತು ಎಂದು ಕಾಂಗ್ರೆಸ್  ಅಭ್ಯರ್ಥಿಯಾಗಿದ್ದ ನಂದಿಗಾವಿ ಶ್ರೀನಿವಾಸ್ ಹೇಳಿದರು.

 ರಾಜ್ಯದಲ್ಲಿ ‌ ಕಾಂಗ್ರೆಸ್ ಪಕ್ಷವು ಬಹುಮತದಿಂದ ಗೆದ್ದಿರುವುದಕ್ಕೆ, ಪಕ್ಷದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಸಂಭ್ರಮಾಚರಣೆಯ ವೇಳೆ ಅವರು ಮಾತನಾಡಿದರು. 

ನಾನು ಸುಮಾರು 59 ಸಾವಿರ ಮತಗಳನ್ನು ಪಡೆದಿರುವುದು ಕಡಿಮೆ ಮತಗಳೇನಲ್ಲ. ಎಲ್ಲೋ ಒಂದು ಚಿಕ್ಕ ತಪ್ಪಿನಿಂದಾಗಿ ಸೋತಿರುವೆ. ನಾನು ಸೋತಿರುವುದಕ್ಕೆ ಪಕ್ಷದ ಕಾರ್ಯ ಕರ್ತರು, ಮುಖಂಡರು ಯಾರೂ ಧೃತಿಗೆಡದೆ ಪಕ್ಷದ ಸಂಘಟನೆ ಯಲ್ಲಿ ತೊಡಗಿಸಿ ಕೊಂಡು ಪಕ್ಷವನ್ನು ಮುನ್ನಡೆಸಿಕೊಂಡು ಹೋಗೋಣ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿರುವುದು ನಮ್ಮ ಅನೇಕ ಕೆಲಸಗಳ ಮಾಡಿಕೊಳ್ಳಲು ಸುವರ್ಣ ಅವಕಾಶ ಸಿಕ್ಕಿರುವುದ ರಿಂದ ತಾಲ್ಲೂಕಿನಲ್ಲಿ ಕೈಗಾರಿಕೆ ಸ್ಥಾಪಿ ಸುವುದಕ್ಕೆ ಮತ್ತು ಮೆಡಿಕಲ್ ಕಾಲೇ ಜು ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲರೂ ಜೊತೆಯಲ್ಲಿ ಹೋರಾಟ ಮಾಡಿ ಸ್ಥಳೀಯ ಜನರಿಗೆ ಉಪಕಾರ ಮಾಡೋಣ ಎಂದು ಹೇಳಿದರು.

ಈ ವೇಳೆ ನಗರಸಭೆ ಸದಸ್ಯ ಶಂಕರ್ ಖಟಾವ್ಕರ್, ಮಾಜಿ ಸದಸ್ಯ ಬಿ.ಕೆ. ಸೈಯದ್ ರೆಹಮಾನ್, ಮುಖಂಡ ಸಿ.ಎನ್. ಹುಲುಗೇಶ್, ಎಂ. ಬಿ. ಅಬಿದಾಲಿ, ಸೇರಿದಂತೆ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಎಲ್. ಬಿ. ಹನುಮಂತಪ್ಪ, ಸನಾವುಲ್ಲಾ, ಆಸೀಫ್ ಜುನೇದಿ, ಗಂಗಾಧರ ಮಲೇಬೆನ್ನೂರು, ಏಜಾಜ್ ಆಹ್ಮದ್, ಜ್ರಫ್ರುಲ್ಲಾ, ನಸ್ರುಲ್ಲಾ, ಪಿ.ಜೆ. ಮಹಾಂತೇಶ್, ರಮೇಶ್ ನಾಯ್ಕ್ ನೇತ್ರಾವತಿ, ಬಿ.ಎನ್. ರಮೇಶ್, ಸವಿತಾ, ನಾಗಮ್ಮ, ರಡ್ಡಿ ಹನುಮಂತಪ್ಪ, ರಾಕೇಶ್, ಆನಂದ್, ಹೆಚ್. ಶಿವಪ್ಪ, ಅಂಜನಿ ಹಾಗೂ ಇತರರು ಹಾಜರಿದ್ದರು. 

error: Content is protected !!