ದಾವಣಗೆರೆ, ಏ. 27- ವಜ್ರೇಶ್ವರಿ ಮಹಿಳಾ ಸಂಸ್ಥೆಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ವಿಜಯ ಸಿ. ಅಕ್ಕಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗಿರಿಜಾ ಬಿಲ್ಲಳ್ಳಿ ಅತಿಥಿಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಪ್ಪು ಮಾರುವ 86 ವರ್ಷದ ಕಾತುನ್ಬಿ ಎನ್ನುವ ಅಜ್ಜಿಗೆ ಸನ್ಮಾನಿಸಲಾಯಿತು. ಚಂದ್ರಿಕಾ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಪ್ರಭು ಪ್ರಾರ್ಥಿಸಿದರು. ತನುಜಾ ಸ್ವಾಗತಿಸಿದರು.