ಕೊಟ್ಟೂರು, ಫೆ. 16- ವಿಜಯ ನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಶ್ರೀ ಗುರು ಕೊಟ್ಟೂರೇಶ್ವರರ ರಥೋತ್ಸವವು ಗುರುವಾರ ಸಂಜೆ ಅಪಾರ ಜನಸ್ತೋಮದ ನಡುವೆ ಸಂಭ್ರಮದಿಂದ ಜರುಗಿತು. ಮಾಘ ಬಹುಳ ದಶಮಿಯ ಮೂಲಾ ನಕ್ಷತ್ರ ಕೂಡಿದಾಗ ಕೊಟ್ಟೂರೇಶ್ವರರು ಜೀವಂತ ಸಮಾಧಿಯಾಗಿದ್ದರು. ಅದೇ ಸಮಯದಲ್ಲಿ ರಥೋತ್ಸವ ನಡೆಯುತ್ತದೆ.
‘ಕೊಟ್ಟೂರು ದೊರೆಯೇ ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲುಮುರಿವೆ ಬಹುಪರಾಕ್’ ಎಂದು ಭಕ್ತರ ಘೋಷಣೆ ಮುಗಿಲು ಮುಟ್ಟಿತ್ತು. ಎಲ್ಲೆಡೆ ಭಕ್ತಿ, ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ರಥ ಬೀದಿಯಲ್ಲಿ ತೇರು ಚಲಿಸುತ್ತಿದ್ದಂತೆ ರಸ್ತೆ ಬದಿ, ಕಟ್ಟಡಗಳ ಮೇಲೆ ಕುಳಿತಿದ್ದವರೆಲ್ಲರೂ ಅಲ್ಲಿಂದಲೇ ಎರಡೂ ಕೈಮುಗಿದು ನಮಸ್ಕರಿಸಿದರು.
January 20, 2025