ವಸ್ತುಗಳ ಖರೀದಿ ಮುನ್ನ ಬಿಐಎಸ್ ಮಾರ್ಕ್ ಖಾತ್ರಿಪಡಿಸಿಕೊಳ್ಳಿ

ಜಿಲ್ಲಾಧಿಕಾರಿ ಬೀಳಗಿ

ದಾವಣಗೆರೆ, ಮಾ.2- ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಗ್ರಾಹಕರು ಅದರಲ್ಲಿ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌) ಮಾರ್ಕ್ ಅಥವಾ ಅಧಿಕೃತ ದೃಢೀಕರಣ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಭಾರತೀಯ ಗುಣಮಟ್ಟ ಮಾನದಂಡ ಸಂಸ್ಥೆ (ಬಿಐಎಸ್), ಕೇಂದ್ರ ಸರ್ಕಾರದ ಕಚೇರಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಇವರ ಸಂಯೋಜನೆಯೊಂದಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸುರಕ್ಷತೆ, ಪರಿಸರ ಸಮತೋಲನ ಸೇರಿದಂತೆ ಒಟ್ಟಾರೆ ಸುರಕ್ಷತೆ ಹಿನ್ನೆಲೆಯಲ್ಲಿ ಜನರು ಬಳಸುವ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಿ ದೃಢೀಕರಿ ಸುವುದು ಅತ್ಯವಶ್ಯವಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ ಮೂಲಕ ಗ್ರಾಹಕರ ವಸ್ತುಗಳನ್ನು ಪರೀಕ್ಷೆ ಮಾಡಿ, ಗುಣಮಟ್ಟ ನಿರ್ಧರಿಸಿ ದೃಢೀಕರಿಸುವ ಕೆಲಸ ಮಾಡುತ್ತಿದೆ.

ಯಾವುದೇ ಉತ್ಪಾದಕರು ಬಿಐಎಸ್ ಸರ್ಟಿಫಿಕೇಷನ್ ಇಲ್ಲದೇ ವಸ್ತುಗಳನ್ನು ಉತ್ಪಾದಿಸುವುದು, ಸಂಗ್ರಹಿಸುವುದು, ಸಾಗಿ ಸುವುದು ಮತ್ತು ಮಾರಾಟ ಮಾಡುವುದು ಸೇರಿದಂತೆ ಯಾವುದೇ ಚಟುವಟಿಕೆ ಕೈಗೊ ಳ್ಳುವುದು ಅಪರಾಧವಾಗುತ್ತದೆ. ಆದ್ದರಿಂದ ಎಲ್ಲ ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ಬಿಐ ಎಸ್ ದೃಢೀಕರಣ ಪಡೆಯಬೇಕು ಎಂದರು.

ಪ್ಯಾಕೇಜ್ಡ್ ಮಿನರಲ್ ಕುಡಿಯುವ ನೀರು, ಸಿಮೆಂಟ್, ಗೃಹೋಪಯೋಗಿ ಎಲೆಕ್ಟ್ರಿಕ್ ವಸ್ತುಗಳಾದ ಸ್ವಿಚ್, ವೈರ್‍ಗಳು, ಹೀಟರ್, ಕುಕ್ಕರ್, ಎಸಿ, ಆಟೋಮೇಟಿವ್ ವಾಹನಗಳು, ಫೀಡಿಂಗ್ ಬಾಟಲ್, ಆಟಿಕೆಗಳು, ಫುಟ್‍ವೇರ್ ಇತ್ಯಾದಿ 344 ವಸ್ತುಗಳು ಬಿಎಸ್‍ಐ ಸರ್ಟಿಫಿಕೇಷನ್‍ಗೆ ಒಳ ಪಟ್ಟಿದ್ದು, ಸಾರ್ವಜನಿಕ ಸುರಕ್ಷತೆ ದೃಷ್ಟಿ ಯಿಂದ ಎಲ್ಲ ಜನಬಳಕೆ ವಸ್ತುಗಳು ಬಿಐಎಸ್ ದೃಢೀಕರಣಕ್ಕೆ ಒಳಪಡಬೇಕೆಂದರು.

ಮಾರುಕಟ್ಟೆಯಲ್ಲಿ ಹಾಗೂ ಫುಟ್‍ಪಾತ್‍ಗಳಲ್ಲಿ ಅನೇಕ ವಸ್ತುಗಳು ಯಾವುದೇ ಗುಣಮಟ್ಟದ ಮಾರ್ಕ್ ಆಗಲೀ, ದೃಢೀಕರಣ ಇಲ್ಲದೇ ಮಾರಾಟವಾಗುತ್ತಿದ್ದು, ಈ ಬಗ್ಗೆಯೂ ಜನರು ಗಮನ ಹರಿಸಬೇಕು ಎಂದರು. 

ಬಿಐಎಸ್ ಹುಬ್ಬಳ್ಳಿ ಬ್ರಾಂಚ್‍ನ ಸೈಂಟಿಸ್ಟ್ ಸಿ. ಅಭಿಷೇಕ್ ನಾಯ್ಡು, ಬಿಐಎಸ್ ಸರ್ಟಿಫಿಕೇಷನ್ ಪಡೆಯುವ ವಿಧಾನವನ್ನು ಪಿಪಿಟಿ ಮೂಲಕ ಪ್ರದರ್ಶಿಸುತ್ತಾ, ಸಾರ್ವ ಜನಿಕ ಸುರಕ್ಷತೆ ಹಿನ್ನೆಲೆಯಲ್ಲಿ ಯಾವುದೇ ಜನಬಳಕೆ ವಸ್ತುವಿಗೆ ಬಿಐಎಸ್ ದೃಢೀಕರಣ ಕಡ್ಡಾಯವಾಗಿದೆ. ಬಿಐಎಸ್ ವಸ್ತುಗಳ ಮಾನದಂಡಗಳನ್ನು ಸೂತ್ರೀಕರಣ ಮಾಡುವ, ಲ್ಯಾಬ್‍ಗಳಲ್ಲಿ ಸ್ಯಾಂಪಲ್ ಪರೀಕ್ಷೆ ಮಾಡುವ, ದೃಢೀಕರಣ ನೀಡುವ ಮತ್ತು ಹಾಲ್‍ಮಾರ್ಕ್ ನೀಡುವ ಕೆಲಸ ಮಾಡುತ್ತದೆ. 

ಸ್ಟಾರ್ ಆಕ್ವಾ ವಾಟರ್ ಪ್ಲಾಂಟ್‍ನ ಮಾಲೀಕ ಟಿ.ಎಸ್.ರಾಮಯ್ಯ ಈ ವೇಳೆ ಮಾತನಾಡಿ, ಐಎಸ್‍ಐ ದೃಢೀಕರಣ ಪಡೆಯದೇ ಇರುವ ವಾಟರ್ ಪ್ಲಾಂಟ್‍ಗಳು ಸಭೆ, ಸಮಾರಂಭಗಳಿಗೆ ಅತಿ ಕಡಿಮೆ ದರದಲ್ಲಿ ಪ್ಯಾಕೇಜ್ಡ್ ನೀರನ್ನು ಪೂರೈಸುತ್ತಿದ್ದು, ಇದರಿಂದ ಐಎಸ್‍ಐ ದೃಢೀಕರಣ ಹೊಂದಿರುವ ವಾಟರ್ ಪ್ಲಾಂಟ್‍ನವರಿಗೆ ಅತ್ಯಂತ ಕಠಿಣ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಅಧಿಕೃತ ಮಾರಾಟಗಾರರಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾ ಮಿನರಲ್ ವಾಟರ್ ಪ್ಲಾಂಟ್‍ಗಳ ಸಂಘದ ವತಿಯಿಂದ ಮನವಿ ಮಾಡುತ್ತೇನೆ ಎಂದರು.

ಬಿಐಎಸ್ ಹುಬ್ಬಳ್ಳಿ ಬ್ರಾಂಚ್‍ನ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಎಸ್.ಡಿ. ಸೆಲ್ವನ್ ಸ್ವಾಗತಿಸಿ, ಮಾತನಾಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ್, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಕೈಗಾರಿಕೋದ್ಯಮಿಗಳಾದ ಮೆ|| ನಾರದಮುನಿ ಟೆಕ್ಸ್‍ಟೈಲ್ಸ್‍ನ ವೃಷಭೇಂದ್ರಪ್ಪ, ಶ್ರೀ ಮಾರ್ಕಂಡೇಯ ಇಂಜಿನಿಯರ್ ವರ್ಕ್ಸ್‌ ರೆಸಿಡೆನ್ಷಿಯ ಗೋಪಾಲಕೃಷ್ಣ ಆರ್, ಗ್ರೀನ್ ಆಗ್ರೋ ಪ್ಯಾಕ್ ಪ್ರೈ.ಲಿ.ನ ಸಂತೋಷ್ ಹೆಚ್.ಆರ್ ಮತ್ತು ಪ್ರವೀಣ್‌ ಬಿ.ಎಂ, ಶ್ರೀ ಮಾರ್ಕಂಡೇಯ ಮತ್ತು ಎಲೆಕ್ಟ್ರಿಕಲ್ ಹರಿಹರದ ಪಿ.ಎಲ್.ರುದ್ರಪ್ಪ, 2 ಕೆ ಗಾರ್ಮೆಂಟ್ಸ್‍ನ ಡಿ.ಶೇಷಾಚಲ, ದುರ್ಗಾಂ ಬಿಕ ಅಪ್ಲೈಯನ್ಸಸ್‌ನ ಪ್ರೀತೇಶ್ ಕುಮಾರ್, ಜೆ.ಎಸ್.ಒ ಕಮ್ಯುಟೆಂಟ್‍ನ ಬಿ.ವೆಂಕಟ ಸ್ವಾಮಿ, ಗಗನ್ ಆಕ್ವಾ ಇಂಡಸ್ಟ್ರೀಸ್‍ನ ಗಗನ್‍ದೀಪ್ ಎ.ಪಿ, ನಾಯ್ಕ್ ಇಂಡಸ್ಟ್ರೀಸ್‍ನ ಮೋತ್ಯಾ ನಾಯ್ಕ್, ನಾರದೇಶ್ವರ ಇಂಜಿನಿ ಯರ್ಸ್‍ನ ಜಗದೀಶ್, ಆರಾಧ್ಯ ಸ್ಟೀಲ್ ಪ್ರೈ.ಲಿ.ನ  ಗೋಪಿ ಎಂ ಹಾಗೂ ಇನ್ನಿತರೆ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.

error: Content is protected !!