ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೋತ್ಸಾಹಿಸಿ

ದಾವಣಗೆರೆ, ಮಾ.6- ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೋತ್ಸಾಹಿಸಿ ಎಂದು ಜೀ ಕನ್ನಡದ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಹಿರಿಯ ಕಲಾವಿದರಾದ ವಿದ್ಯಾಮೂರ್ತಿ ಕಿವಿ ಮಾತು ಹೇಳಿದರು.

ವನಿತಾ ಸಮಾಜ, ವನಿತಾ  ಸಹಾಯ ಸಮಿತಿ ವತಿಯಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಮಹಿಳಾ ಸಾಂಸ್ಕೃತಿಕ ಸಮಾರಂಭ ಹಾಗೂ ಸೇವಾ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಚೈತ್ರ ಮಾಸದಲ್ಲಿ ಎಲೆಗಳು ಚಿಗುರುತ್ತವೆ. ಸೂರ್ಯನ ಶಾಖವನ್ನು ಹೀರಿ ಬೇರಿಗೆ ರವಾನಿಸುತ್ತವೆ. ಅದರಿಂದ ಬೇರು ಗಟ್ಟಿಯಾಗಿ, ಮರ ಭದ್ರವಾಗಿ ನಿಲ್ಲಲು ಸಹಕಾರಿಯಾಗುತ್ತದೆ. ಎಲೆ ಇಲ್ಲದೆ ಬೇರಿಗೆ ಶಕ್ತಿ ಇಲ್ಲ. ಬೇರಿಲ್ಲದೆ ಮರವಿಲ್ಲ. ಹಳೆಯ ಬೇರು ಹಾಗೂ ಹೊಸ ಚಿಗುರಿನ ಸಂಬಂಧದಂತೆ ಕಿರಿಯರು ಹಾಗೂ ಹಿರಿಯರು ಪರಸ್ಪರ ಸಹಕಾರದಿಂದಿರಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಅತ್ತೆ-ಸೊಸೆ ಯಂದಿರ ನಡುವೆ ವೈಮನಸ್ಸುಗಳು ಹೆಚ್ಚುತ್ತಿವೆ.  ಹಿರಿಯರು ಮನೆಯಲ್ಲಿ ಹೊಸ ಚಿಗುರಿಗೆ ಅವಕಾಶ ಮಾಡಿಕೊಡ ಬೇಕು. ಸೊಸೆ ಬಂದಾಗ ಅತ್ತೆಗೆ ತಳಮಳ ಶುರುವಾಗುವುದು ಸಹಜ. ಅದನ್ನು ಬದಿಗಿಟ್ಟು ಸೊಸೆಯನ್ನು ಪ್ರೋತ್ಸಾಹಿಸ ಬೇಕು. ಅದರಲ್ಲೂ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವಂತಹ ಸೊಸೆ ಯಂದಿರಿಗೂ ಪೂರಕ ವಾತಾವರಣ ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದರು.

ಜೀ ಕನ್ನಡದ ಹಿಟ್ಲರ್ ಕಲ್ಯಾಣ ಧಾರಾವಾಹಿ ಖ್ಯಾತಿಯ ಕಲಾವಿದೆ ಕುಮಾರಿ ಮಲೈಕ ಟಿ.ವಿ. ಮಾತನಾ ಡುತ್ತಾ, ಮನೆಗಳಲ್ಲಿ, ಕಚೇರಿಗಳಲ್ಲಿ, ಓದಿನ ವಿಷಯ ಸೇರಿದಂತೆ ಎಲ್ಲಾ ವಿಧ ಗಳಲ್ಲೂ ಮಹಿಳೆಯರನ್ನು ಪ್ರೋತ್ಸಾಹಿ ಸುವ ಅಗತ್ಯವಿದೆ ಎಂದು ಹೇಳಿದರು. 

ಯುವತಿಯರಿಗೆ ಬೇಗ ವಿವಾಹಕ್ಕಾಗಿ ಒತ್ತಡ ಹೇರಬೇಡಿ. ಅವಳ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಿ. ನನ್ನ ಸಾಧನೆ ಹಿಂದೆಯೂ ಹೆತ್ತವರು ಸೇರಿದಂತೆ ಕುಟುಂಬದ ಪ್ರೋತ್ಸಾಹವಿದೆ ಎಂದು ಹೇಳಿದರು.

ಮಾಜಿ ಸಚಿವೆ, ವನಿತಾ ಸಮಾಜದ ಗೌರವಾಧ್ಯಕ್ಷರೂ ಆಗಿರುವ ಡಾ.ಸಿ. ನಾಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಗುಂಡಿ ಶೋಭಾ ಉಪಸ್ಥಿತರಿದ್ದರು.

ಮಂಜುಳಾ ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಪ್ರಸಾದ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಂಗೀತ ಮತ್ತು ಕು.ರಕ್ಷರಾವ್ ಪ್ರಾರ್ಥಿಸಿದರು. ಸೌಮ್ಯ  ಪುನೀತ್, ನತೀಜ್ ನಿರೂಪಿಸಿದರು. ಲತಿಕಾ ಶೆಟ್ಟಿ ವಂದಿಸಿದರು. 

error: Content is protected !!