ಹರ್ಷನ ಹತ್ಯೆ : ಭಾವಸಾರ ಕ್ಷತ್ರಿಯ ಸಮಾಜದ ಶೋಕ

ದಾವಣಗೆರೆ, ಫೆ.24- ಶಿವಮೊಗ್ಗದಲ್ಲಿ ನಡೆದ ಹರ್ಷನ ಕಗ್ಗೊಲೆಯನ್ನು ಖಂಡಿಸಿ, ಮೃತನ ಆತ್ಮಕ್ಕೆ ಶಾಂತಿ ಕೋರಿ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಬುಧವಾರ ಸಂಜೆ ಮೇಣದ ಬೆಳಕು ಮೂಡಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಹರ್ಷನು ಯುವ ಭಜರಂಗ ದಳದ ನಿಷ್ಟಾವಂತ ಕಾರ್ಯಕರ್ತನಾಗಿದ್ದು, ದೇಶಭಕ್ತಿ, ದೇಶಾಭಿಮಾನ ಉಳ್ಳವನಾಗಿದ್ದ. ಇಂತಹ ದೇಶಭಕ್ತ, ಅಮಾಯಕನ ಹತ್ಯೆಯಿಂದ ದೇಶಕ್ಕೆ, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಮಾಜದ ಮುಖಂಡರು ಸ್ಮರಿಸಿದರು.

ಹರ್ಷನ ಕುಟುಂಬಕ್ಕೆ ಸರ್ಕಾರ ಪರಿಹಾರ ಧನ ನೀಡಬೇಕು. ಅಲ್ಲದೇ ಕುಟುಂಬಕ್ಕೆ ಆತನ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಪಾಂಡುರಂಗ ದಯಪಾಲಿಸಲಿ, ಹರ್ಷ ಜಿಂಗಾಡೆ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮಾತ್ರವಲ್ಲ ಹತ್ಯೆಗೈದ ದುಷ್ಕರ್ಮಿಗಳಿಗೆ ಕಠಿಣ ಗಲ್ಲುಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಕೊಲೆ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸುವಂತೆ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಒತ್ತಾಯಿಸಿ, ಇದೇ ವೇಳೆ ಭಾವಸಾರ ಕ್ಷತ್ರಿಯ ಸಮಾಜದಿಂದ ಮನವಿ ಪತ್ರ ಸಲ್ಲಿಸಲು ಸಹಿ ಸಂಗ್ರಹಿಸಲಾಯಿತು. 

ಈ ವೇಳೆ ಸಮಾಜದ ಮುಖಂಡರಾದ ಅರುಣ್ ಗುಜ್ಜರ್, ರಘು ಜಯಪ್ರಕಾಶ್ ಅಂಬರ್‌ಕರ್, ರಮೇಶ್ ತೇಲ್ಕರ್, ವಿಜಯ್ ಕುಮಾರ್ ಟಿಕಾರೆ, ನಿಂಗೋಜಿ ರಾವ್ ಗುಜ್ಜರ್, ರಮೇಶ್ ಬಾಬು, ಚಂದ್ರಕಾಂತ ವಾದೋನಿ, ವಿಜಯ್ ವಾದೋನಿ, ವಿನಯ್ ಜಿಂಗಾಡೆ, ರೂಪೇಶ್ ತೇಲ್ಕರ್, ಪಾಂಡುರಂಗ ಗಡ್ಡಾಳೆ, ಕಸ್ತೂರಿ ಬಾಯಿ ಗುಜ್ಜರ್ ಇತರರು ಮಾತನಾಡಿದರು.

ಭಾವಸಾರ ಕ್ಷತ್ರಿಯ ದೈವ ಮಂಡಳಿ, ಭಾವಸಾರ ವಿಜನ್ ಇಂಡಿಯಾ, ಸಿಟಿ ಭಾವಸಾರ ಕ್ಷತ್ರಿಯ ಸಮಾಜದ ಪದಾಧಿಕಾರಿಗಳು, ಭಜನಾ ಮಂಡಳಿ ಸಮಿತಿ, ತರುಣ ಮಂಡಳದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು,
ಕಲಾವತಿ ಮಹಿಳಾ ಮಂಡಳಿ ಪದಾಧಿಕಾರಿಗಳು, ದುರ್ಗಾದೇವಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

error: Content is protected !!