ದಾವಣಗೆರೆಯ ಶ್ರೀ ಶಾರದ ಸಂಗೀತ ಮತ್ತು ನೃತ್ಯ ಕಲಾ ಶಾಲೆ ವತಿಯಿಂದ ನೃತ್ಯ ಕ್ಷೇತ್ರದ ಮಹಾನ್ ಚೇತನ ಕೀರ್ತಿಶೇಷರಾದ ರುಕ್ಮಿಣಿ ದೇವಿ ಅರುಂಡೇಲ್ ಅವರ ಸ್ಮರಣಾರ್ಥ ನೃತ್ಯ ಸಮರ್ಪಣಾ – 2025 (ಭರತ ನಾಟ್ಯ ಕಾರ್ಯಕ್ರಮ) ವು ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.
ಶ್ರೀ ಶಾರದ ಸಂಗೀತ ಮತ್ತು ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಸಮ ರ್ಪಣಾ ಕಾರ್ಯಕ್ರಮವನ್ನು ನಡೆಸಿಕೊಡಲಿ ದ್ದಾರೆ. ವಿಧುಷಿ ಶ್ರೀಮತಿ ಪೂರ್ಣಿಮಾ ಭಾಗವತ ಅವರಿಂದ ನಟ್ಟುವಾಂಗ, ವಿದ್ವಾನ್ ರಾಜಗೋಪಾಲ ಭಾಗವತ್ ಅವರಿಂದ ಹಾಡುಗಾರಿಕೆ ನಡೆಯಲಿದ್ದು, ಹೊಸಪೇಟೆಯ ವಿದ್ವಾನ್ ಬಿ. ಶ್ರೀನಾಥ್ ಭಟ್ ಅವರು ಮೃದಂಗ ನುಡಿಸುವರು.
ಶ್ರೀ ಶಾರದ ಸಂಗೀತ ಮತ್ತು ನೃತ್ಯ ಕಲಾ ಶಾಲೆಗೆ ಕಳೆದ 34 ವರ್ಷಗಳಿಂದ ಭಾರತೀಯ ಶಾಸ್ತ್ರೀಯ ಕಲಾ ಪ್ರಕಾರಗಳಾದ ಭರತ ನಾಟ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ನೀಡುತ್ತಿರುವುದರ ಜೊತೆ-ಜೊತೆಗೆ ಸಾಂಸ್ಕೃತಿಕ ಕಾರ್ಯ ಕ್ರಮ ಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ವಿಧುಷಿ ಶ್ರೀಮತಿ ಪೂರ್ಣಿಮಾ, ವಿದ್ವಾನ್ ರಾಜಗೋಪಾಲ ಭಾಗವತ್ ತಿಳಿಸಿದ್ದಾರೆ.
ಇಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಈಶ್ವರಮ್ಮ ಶಾಲೆಯ ಅಧ್ಯಕ್ಷರಾದ ಶ್ರೀಮತಿ ಕೆ.ಆರ್. ಸುಜಾತ ಕೃಷ್ಣ, ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಎ.ಆರ್. ಉಷಾ ರಂಗನಾಥ್, ಸಿದ್ದಗಂಗಾ ಪಿಯು ವಿಜ್ಞಾನ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್, ಸಿದ್ದಗಂಗಾ ಶಾಲೆಯ ಸಿಬಿಎಸ್‌ಇ ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಎಸ್. ಚಿಮ್ಮದ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಭರತ ನಾಟ್ಯ ರಂಗ ಪ್ರವೇಶ ಮಾಡಿರುವ ವಿದುಷಿ ಡಾ. ಸುನಿಧಿ ಎಂ. ಘಟಿಕರ್ ಅವರಿಗೆ ನರ್ತನ ಸಿರಿ ಪುರಸ್ಕಾರ ನೀಡಲಾಗುವುದು.
ಭರತ ನಾಟ್ಯ ವಿದ್ತತ್ ಅಂತಿಮ ವಿಭಾಗದಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆ ಯಾಗಿರುವ ಕು. ಬಿ. ಜ್ಯೋತಿ, ಭರತ ನಾಟ್ಯ ವಿಧ್ವತ್ ಪೂರ್ವ ವಿಭಾಗದದಲ್ಲಿ ಉನ್ನತ ವಿಭಾಗದಲ್ಲಿ ತೇರ್ಗಡೆಯಾದ ಕು. ಟಿ. ತನುಶ್ರೀ, ಭರತ ನಾಟ್ಯ ಸೀನಿಯರ್ ವಿಭಾಗ ದಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿರುವ ಕು. ಧನ್ಯ ನಾಗೇಶ್, ಭರತ ನಾಟ್ಯ ಜ್ಯೂನಿಯರ್ ವಿಭಾಗದಲ್ಲಿ ಉನ್ನತ ಮಟ್ಟ ದಲ್ಲಿ ತೇರ್ಗಡೆಯಾದ ಕು. ವಿ.ಎಸ್. ಚೈತನ್ಯ ಅವರುಗಳನ್ನು ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಗುವುದು.