ಹರಪನಹಳ್ಳಿ ಪುರಸಭೆ ಜಾಗ ಒತ್ತುವರಿ ತೆೇರವಿಗೆ ಆಗ್ರಹ

ಹರಪನಹಳ್ಳಿ ಪುರಸಭೆ ಜಾಗ ಒತ್ತುವರಿ ತೆೇರವಿಗೆ ಆಗ್ರಹ

ಹರಪನಹಳ್ಳಿ,ಡಿ.19-  ಪಟ್ಟಣದ ವ್ಯಾಪ್ತಿ ಯಲ್ಲಿನ ಪುರಸಭೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಅವರನ್ನು ತೆರವು ಗೊಳಿಸಬೇಕು ಎಂದು ಪುರಸಭೆ ಸದಸ್ಯರು ಆಗ್ರಹಿಸಿದರು.

ಅಧ್ಯಕ್ಷೆ ಫಾತೀಮಾಬಿ ಅವರ ಅಧ್ಯಕ್ಷತೆಯಲ್ಲಿ ಇಂದು ಪುರಸಭೆ ಸಭಾಂಗಣದಲ್ಲಿ   ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಪಟ್ಟಣದ ವ್ಯಾಪ್ತಿಯಲ್ಲಿ ಪಾರ್ಕ್ ಸೇರಿದಂತೆ ಹಲವು ಕಡೆ ಜಾಗ ಒತ್ತುವರಿಯಾಗಿದೆ. ದೊಡ್ಡವರೂ ಸಹ ಪುರಸಭೆ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ದೂರುಗಳಿವೆ,   ಈ ಬಗ್ಗೆ ಗಮನ ಹರಿಸಿ ಒತ್ತುವರಿ ಆಗಿರುವ ಜಾಗವನ್ನು ತೆರವುಗೊಳಿಸಬೇಕು ಎಂದು   ಆಗ್ರಹಿಸಿದರು.

ಪಟ್ಟಣದಲ್ಲಿ  ಬಾಲಕಿಯರಿಗಾಗಿ ವಸತಿ ಶಾಲೆ ಪ್ರಾರಂಭಿಸಲು ಹಗರಿಬೊಮ್ಮನಹಳ್ಳಿ ಲಿಂಗಾಯತ ಪಂಚಮಸಾಲಿ ಟ್ರಸ್ಟ್‍ನವರು ಜಾಗಕ್ಕಾಗಿ ಅರ್ಜಿ ಸಲ್ಲಿಸಿದ್ದು, ಸಭೆ ಇದಕ್ಕೆ ಅನುಮೋದಿಸಿತು.

ಬೆಂಗಳೂರಿನ ಕೆ.ವಿಜಯ, ಮುಳುಗುಂದ ಟ್ರಸ್ಟ್,  ಇವರು ಪಟ್ಟಣದಲ್ಲಿ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕಾಗಿ ಖಾಲಿ ನಿವೇಶನ ಕೋರಿ ಪುರಸಭೆಗೆ ಪ್ರಸ್ತಾವನೆ ಸಲ್ಲಿಸಿತ್ತು, ಈ ಬಗ್ಗೆ ಪತ್ರಿಕಾ ನೋಟಿಫಿಕೇಷನ್ ಹೊರಡಿಸಿದ್ದು, ಯಾವುದೇ ಆಕ್ಷೇಪಣೆ ಇಲ್ಲದ ಕಾರಣ ಸಭೆ ಒಪ್ಪಿಗೆ ಸೂಚಿಸಿತು.

ಪಟ್ಟಣದ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣಕ್ಕಾಗಿ ಕಚೇರಿಯಿಂದ ಪಡೆದ ಕಟ್ಟಡ ಪರವಾನಿಗೆ ಅವಧಿ ಮುಕ್ತಾಯಗೊಂಡ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಪರವಾನಿಗೆ ನವೀಕರಣಕ್ಕೆ ಚದರ ಅಡಿ ಲೆಕ್ಕದಲ್ಲಿ ಶುಲ್ಕ ನಿಗದಿಪಡಿಸಲು ಸಭೆ ಒಪ್ಪಿಗೆ ಸೂಚಿಸಿತು.

ಪುರಸಭೆ   ಉಪಾಧ್ಯಕ್ಷ ಎಚ್.ಕೊಟ್ರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಪುರಸಭೆ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.

error: Content is protected !!