ಏಡ್ಸ್ ಜಾಗೃತಿಗೆ ನಗರದಲ್ಲಿ ವಾಕಥಾನ್

ಏಡ್ಸ್ ಜಾಗೃತಿಗೆ ನಗರದಲ್ಲಿ ವಾಕಥಾನ್

ದಾವಣಗೆರೆ, ಡಿ.1- ಡಿಸೆಂಬರ್ 1 ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜೆ.ಜೆ.ಎಂ ಮೆಡಿಕಲ್‌ ಕಾಲೇಜ್ ಮತ್ತು ಎಸ್‌.ಎಸ್‌.ಐ.ಎಂ.ಎಸ್‌ನ ಚರ್ಮರೋಗ ತಜ್ಞರು ಏಡ್ಸ್ ಕುರಿತು ಜಾಗೃತಿ ಮೂಡಿಸಲು ವಾಕಥಾನ್‌ ಆಯೋಜಿಸಿದ್ದರು. 

ದಾವಣಗೆರೆ ಡರ್ಮಟೋಲಜಿಸ್ಟ್ ಅಸೋಸಿಯೇಷನ್‌ ಅಧ್ಯಕ್ಷ  ಡಾ. ಬಿ. ಕೆ. ವಿಶ್ವನಾಥ್, ಹಿರಿಯ ಚರ್ಮರೋಗ ತಜ್ಞ ಡಾ. ನಾಡಿಗ ರಾಜಶೇಖರ್‌, ಜೆ.ಜೆ.ಎಂ.ಎಂ.ಸಿ. ಚರ್ಮರೋಗ ವಿಭಾಗದ  ಮುಖ್ಯಸ್ಥ  ಡಾ. ಸೂಗರೆಡ್ಡಿ ಭಾಗವಹಿಸಿದ್ದರು. 

ಎಸ್‌.ಎಸ್‌.ಐ.ಎಂ.ಎಸ್‌ ಚರ್ಮರೋಗ ವಿಭಾಗದ  ಮುಖ್ಯಸ್ಥ  ಡಾ.  ಮಂಜುನಾಥ್ ಹುಲ್ಮನಿ, ಪ್ರಾಧ್ಯಾಪಕರಾದ  ಡಾ. ಮಂಗಳ ಎಚ್.ಸಿ., ಇನ್ನಿತರೆ ಚರ್ಮರೋಗ ತಜ್ಞರು ಹಾಗೂ ಚರ್ಮರೋಗ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡು ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಮೂಡಿಸಿದರು. 

`ಏಡ್ಸ್ ಮುಕ್ತ ಸಮಾಜದ ದೃಷ್ಟಿಕೋನ’ ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವಾಕಥಾನ್‌ನೊಂದಿಗೆ ವಿದ್ಯಾರ್ಥಿಗಳು ಏಡ್ಸ್ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶಿಸಿದರು.

error: Content is protected !!