ಗಮನ ಸೆಳೆದ ಮಹಿಳೆಯರ ಬೈಕ್ ರ‍್ಯಾಲಿ

ಗಮನ ಸೆಳೆದ ಮಹಿಳೆಯರ ಬೈಕ್ ರ‍್ಯಾಲಿ

ದಾವಣಗೆರೆ, 9- ವಿಶ್ವ ಹಿಂದೂ ಪರಿಷದ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ವತಿಯಿಂದ ವಿಜ ಯದಶಮಿ ಶೋಭಾಯಾತ್ರೆ ಅಂಗವಾಗಿ ಇಂದು ಮಹಿಳಾ ಬೈಕ್ ರ‍್ಯಾಲಿ ನಡೆಯಿತು.

ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಬಿಜೆಪಿ ಮಹಿಳಾ ಮುಖಂಡರೂ, ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ ಕೇಸರಿ ಬಾವುಟ ತೋರಿಸುವ ಮೂಲಕ ಬೈಕ್ ರ‍್ಯಾಲಿ ಗೆ ಚಾಲನೆ ನೀಡಿದರು.

ರ‍್ಯಾಲಿ ಯಲ್ಲಿ ಮಹಿಳೆಯರು ಕೇಸರಿ ಪೇಟ ಧರಿಸಿ, ದುರ್ಗಿಯರಂತೆ ಕಂಗೊಳಿ ಸುತ್ತಿದ್ದರು. ಬಹುತೇಕ ಮಹಿಳೆಯರು ಪುರುಷರಿಗಿಂತ ನಾವೇನು ಕಡಿಮೆ ಎನ್ನುವಂತೆ ಸಡಗರ, ಸಂಭ್ರಮದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಕೆ.ಬಿ. ಶಂಕರ ನಾರಾಯಣ, ಹೆಚ್.ಸಿ. ಜಯಮ್ಮ, ಚೇತನಾ ಶಿವಕುಮಾರ್, ಹೇಮಾ, ರೇಖಾ ವಾಲಿ, ಕಲ್ಯಾಣಮ್ಮ, ಶ್ರಾವಣಿ, ತನಿಷ್ಕ, ಲಕ್ಷ್ಮಿ, ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ರಾನಡೆ, ಶಂಭುಲಿಂಗಪ್ಪ, ಮಲ್ಲಿಕಾರ್ಜುನ್ ಮತ್ತಿತರರು ರಾಲಿಯಲ್ಲಿ ಭಾಗವಹಿಸಿದ್ದರು.

error: Content is protected !!