ದಾವಣಗೆರೆ, ಅ.9- ವೀರರಾಣಿ ಕಿತ್ತೂರು ಚನ್ನಮ್ಮಾಜಿಯ 200ನೇ ವಿಜಯೋತ್ಸವ ರಥವು ಬುಧವಾರ ಸಂಜೆ ನಗರಕ್ಕೆ ಆಗಮಿಸಿದಾಗ, ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಮಹಾನಗರ ಪಾಲಿಕೆ ಉಪ ಮೇಯರ್ ಸೋಗಿ ಶಾಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ಸಮಾಜದ ಮುಖಂಡರುಗಳಾದ ಬಿ.ಸಿ. ಉಮಾಪತಿ, ಬಿ.ಜಿ. ಅಜಯ್ ಕುಮಾರ್, ಅಶೋಕ್ ಗೋಪನಾಳ್, ಅಣಜಿ ಪ್ರಶಾಂತ್ ಶೆಟ್ರು ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚನ್ನಮ್ಮಾಜಿ ವಿಜಯೋತ್ಸವ ರಥ
