ಹರಿಹರ : ಶಿಥಿಲಗೊಂಡ ಶಾಲಾ-ಕಾಲೇಜು ಕಟ್ಟಡಗಳ ದುರಸ್ತಿಗೆ ಅನುದಾನಕ್ಕೆ ಮನವಿ

ಹರಿಹರ : ಶಿಥಿಲಗೊಂಡ ಶಾಲಾ-ಕಾಲೇಜು ಕಟ್ಟಡಗಳ ದುರಸ್ತಿಗೆ ಅನುದಾನಕ್ಕೆ ಮನವಿ

ಹರಿಹರ, ಅ. 29 – ಶಿಥಿಲವಾದ ಕೊಠಡಿಗಳ ನೆಲ ಸಮ ಮಾಡಿ ಹೊಸದಾಗಿ ಕಟ್ಟಡ ಕಟ್ಟುವುದಕ್ಕೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೆ ಮತ್ತು ಅಧಿಕಾರಿ ವರ್ಗದವರಿಗೆ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸುರೇಶ್ ಇಟ್ನಾಳ್ ಸೂಚಿಸಿದರು.

ನಗರದ ಹೈಸ್ಕೂಲ್ ಬಡಾವಣೆಯ ಹಳ್ಳದ ಕೇರಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟು ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಲೆಯ ಶೌಚಾಲಯ ಕಟ್ಟಡ ಕಾಮಗಾರಿ ಶೇ. 60 ರಷ್ಟು ಮುಗಿದಿದ್ದು, ಕೆಲವು ವ್ಯಕ್ತಿಗಳು ತಮ್ಮ ಪತ್ರಿಷ್ಟೆ ಗೊಸ್ಕರ ಪಕ್ಕದಲ್ಲಿ ದೇವಸ್ಥಾನ ಇದೆ ಎಂದು ಅಡ್ಡಿಪಡಿಸುತ್ತಿರುವುದು, ಇದು ಸಮಂಜಸವಾಗಿ ಇರದೆ ಇರೋದರಿಂದ ಅಡ್ಡಿಪಡಿಸುತ್ತಿರುವ ವ್ಯಕ್ತಿಗಳ ಮಾತಿಗೆ ಮನ್ನಣೆ ಕೊಡುವುದನ್ನು ಬಿಟ್ಟು ಕಾಮಗಾರಿ ಪೂರ್ಣಗೊಳಿಸಿ ಒಂದು ವೇಳೆ ಕಾಮಗಾರಿ ತಡೆಯುವುದಕ್ಕೆ ಮುಂದಾದರೆ ಪೊಲೀಸ್ ಇಲಾಖೆಯ ಸಹಕಾರ ಪಡೆದುಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಶಾಲೆಯ ಪಕ್ಕದಲ್ಲಿ ಕೊಠಡಿಯೊಂದು ನಿರ್ಮಾಣ ಗೊಳ್ಳುತ್ತಿದ್ದು, ಅದಕ್ಕೂ ಡಿ.ಆರ್.ಎಂ ಮೈದಾನದ ಕ್ರೀಡಾಭಿವೃದ್ಧಿ ಸಂಘದವರು ಅಡ್ಡಿಪಡಿಸ ಲಾಗುತ್ತಿದೆ ಎಂದು ಸ್ಥಳದಲ್ಲಿ ಮಾಹಿತಿ ಪಡೆದ ಅವರು, ಸಂಘದ ಅಧ್ಯಕ್ಷ ವಕೀಲ ಆನಂದ್ ಕುಮಾರ್ ಅವರೊಂದಿಗೆ ಚರ್ಚಿಸಿ ಶಾಲಾ ಮಕ್ಕಳಿಗೆ ತೊಂದರೆ ಆಗುವ ಕಾರಣಕ್ಕೆ ಕೊಠಡಿ ಕಟ್ಟಲಾ ಗುತ್ತಿದೆ ಎಂದು ವಿವರಣೆ ನೀಡಿದರು. ಆದರೆ ವಕೀಲರು ಶಾಲೆ ಹಿಂಭಾಗದಲ್ಲಿ ಸಾಕಷ್ಟು ಜಾಗವಿದೆ ಶಿಥಿಲವಾಗಿರುವ ಕೊಠಡಿ ಗಳ ಜಾಗದಲ್ಲಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡುವಂತೆ ಹೇಳಿದರು.

ಇದೇ ವೇಳೆ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ರಹಮತ್  ಮತ್ತು ಡಿ.ಆರ್.ಎಂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಬಿವುಲ್ಲಾ ಮುಂತಾದವರು ಪ್ರೌಢಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿ ಶಾಲೆಯನ್ನು ಪರಿಶೀಲಿಸಿದರು. ಈ ಹಿಂದೆ ಶಾಲಾ ಸುಧಾರಣಾ ಸಮಿತಿಯಿಂದ ಕೊಠಡಿಗಳಿಗೆ ಟೆಂಡರ್ ನೀಡಿರುವ ಬಗ್ಗೆ ಮಾಹಿತಿ ಪಡೆದು ಅದರ ವಿವರವನ್ನು ತಮಗೆ ಕಳಿಸುವಂತೆ ಮುಖ್ಯೋಪಾಧ್ಯಾಯರಿಗೆ ತಿಳಿಸಿದರು.

ಈ ಸಮಯದಲ್ಲಿ ಡಿ.ಆರ್.ಎಂ ಕ್ರೀಡಾಭಿವೃದ್ಧಿ ಸಂಘದ ಕಾರ್ಯದರ್ಶಿ ಸಿದ್ದೇಶ್, ಉಪಾಧ್ಯಕ್ಷ ರವಿ, ಪರಶುರಾಮ್, ಸುನಿಲ್, ಗೋಪಾಲಿ, ರಾಘವೇಂದ್ರ ಕೊಂಡಜ್ಜಿ, ಸಂತೋಷ್, ದಾದಾಪೀರ್, ಪ್ರೇಮ್ ಇತರರು ಉಪಸ್ಥಿತರಿದ್ದರು.

error: Content is protected !!