ಜೀರ್ಣ ಶಕ್ತಿ, ಸಕ್ಕರೆ ಪ್ರಮಾಣ ನಿಯಂತ್ರಣ, ಚರ್ಮದ ಸಮಸ್ಯೆ ಹೀಗೆ ಅನೇಕ ಕಾಯಿಲೆಗಳಿಗೆ ರಾಮಬಾಣದಂತಿರುವ ನೇರಳೆ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಬಡವರು ಮಾತ್ರವೇ ಹೆಚ್ಚಾಗಿ ತಿನ್ನುತ್ತಿದ್ದ ಈ ನೇರಳೆಯನ್ನು ಈಗ ಶ್ರೀಮಂತರೇ ಹೆಚ್ಚಾಗಿ ಹುಡುಕಿಕೊಂಡು ತಿನ್ನಲಾರಂಭಿಸಿದ್ದಾರೆ. ಹೀಗಾಗಿ ಈ ಹಣ್ಣು ಕಾಲು ಕೆ.ಜಿ.ಗೆ 60 ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ.
January 15, 2025