ಸ್ವಕುಳಸಾಳಿ ಸಮಾಜದ ಮಹಿಳೆಯರಿಂದ ಆಷಾಢ ಮಾಸದ ಕಾರ್ಯಕ್ರಮ
ದಾವಣಗೆರೆ, ಜು. 15 – ಸ್ಥಳೀಯ ಸ್ವಕುಳಸಾಳಿ ಸಮಾಜದ ಮಹಿಳಾ ಮಂಡಳಿ ವತಿಯಿಂದ ಆಷಾಢ ಮಾಸದ ಅಂಗವಾಗಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಬುತ್ತಿ ಪೂಜೆ, ಅಭಿಷೇಕ, ಭಜನೆ ಕಾರ್ಯಕ್ರಮಗಳನ್ನು ಇಂದು ಮುಂಜಾನೆ ನೆರವೇರಿಸಲಾಯಿತು. ನಂತರ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಶ್ರೀದೇವಿಯ ಭಜನೆಗಳು, ಉಡಿ ತುಂಬುವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಜಾತ ರೋಖಡೆ ನೇತೃತ್ವದಲ್ಲಿ ಏರ್ಪಾಡಾಗಿದ್ದ ಈ ಕಾರ್ಯಕ್ರಮದಲ್ಲಿ ಸ್ವಕುಳಸಾಳಿ ಸಮಾಜದ ಮಹಿಳೆಯರು ಪಾಲ್ಗೊಂಡಿದ್ದರು.