ಆಸ್ಪತ್ರೆ ವಸತಿ ಗೃಹ ಕಟ್ಟಡ ದುರಸ್ತಿ ಮೇಲ್ದರ್ಜೆಗೆ ಕ್ರಮ

ಆಸ್ಪತ್ರೆ ವಸತಿ ಗೃಹ ಕಟ್ಟಡ ದುರಸ್ತಿ ಮೇಲ್ದರ್ಜೆಗೆ ಕ್ರಮ

ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ; ಸಚಿವ ದಿನೇಶ್‌ ಗುಂಡೂರಾವ್

ಜಗಳೂರು, ಜು.12- ಹಂತ ಹಂತವಾಗಿ ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕೆ ಕ್ರಮ ಕೈಗೊಂಡು 200 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ತಾಲ್ಲೂಕು ಆಸ್ಪತ್ರೆಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಸಾರ್ವಜನಿಕ‌‌‌ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಸ್ಥಳೀಯ ಶಾಸಕ ಬಿ. ದೇವೇಂದ್ರಪ್ಪ ಅವರ ಮನವಿಗೆ ಸ್ಪಂದಿಸಿ, ಜಗಳೂರು ಆಸ್ಪತ್ರೆಯ ಸ್ಥಿತಿಗತಿ ಪರಿಶೀಲಿಸಲು ಭೇಟಿ ನೀಡಿರುವೆ ಎಂದು ತಿಳಿಸಿ. ಆರೋಗ್ಯ ಇಲಾಖೆ ವಸತಿ ಗೃಹ ಕಟ್ಟಡವನ್ನು 65 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ದುರಸ್ತಿಗೆ ಕ್ರಮ ಕೈಗೊಳ್ಳಲು ಹಾಗೂ 6 ಜನ ವೈದ್ಯರ ಕೊರತೆಯಿದ್ದಿದ್ದಕ್ಕೆ ಹೊರಗುತ್ತಿಗೆ ಆಧಾರದಲ್ಲಿ ಆದ್ಯತೆ ಮೇರೆಗೆ ನೇಮಕಾತಿಗೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ಶಾಸಕರ ಹಾಗೂ ಉಪಸಮಿತಿ ನೇತೃತ್ವದಲ್ಲಿ ಟೆಂಡರ್ ಕರೆಯಲಾಗುವುದು. 

ದುರಸ್ತಿ ಕಾಮಗಾರಿ ಪೂರ್ಣಗೊಂಡ ನಂತರ ಟಿಎಚ್‌ಓ ಕಚೇರಿಯನ್ನು ವಸತಿ ಗೃಹಕ್ಕೆ ಸ್ಥಳಾಂತರಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗು ವುದು ಎಂದು ಸಚಿವರು ಭರವಸೆ ನೀಡಿದರು.

ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ನನ್ನ ಒತ್ತಡ ಹಾಗೂ ಮನವಿಗೆ ಸ್ಪಂದಿಸಿ ಆಗಮಿಸಿದ ಆರೋಗ್ಯ ಸಚಿವರಿಗೆ ಅಭಿನಂದನೆ ತಿಳಿಸಿದ ಅವರು, ಸಚಿವರ ಸಹಕಾರದಿಂದ ತಾಲ್ಲೂಕಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ‌ಹೆಚ್ಚಿನ ಆದ್ಯತೆ ನೀಡುವೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ‌ಎಸ್‌.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಎಸ್. ಮಂಜುನಾಥ್, ಮುಖಂಡರಾದ ಪಿ.ಎಸ್. ಸುರೇಶ್ ಗೌಡ, ಮಹೇಶ್ವರಪ್ಪ, ತಿಮ್ಮಣ್ಣ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

error: Content is protected !!