ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ

ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ

ಬಳ್ಳಾರಿ, ಜೂ. 21 – ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತದ ವತಿಯಿಂದ ತೋರಣಗಲ್‌ನ ಜಿಂದಾಲ್ ಕಂಪನಿಯಲ್ಲಿ ಆಯೋಜಿಸಿದ್ದ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಸಚಿವ ಸಂತೋಷ ಲಾಡ್, ಸಂಸದ ತುಕಾರಾಂ, ನಟಿ ಶ್ರೀಲೀಲಾ ಭಾಗಿಯಾಗಿದ್ದರು.

ಬಳ್ಳಾರಿಯ ಹಲವು ಶಾಲೆಗಳ ವಿದ್ಯಾರ್ಥಿಗಳು, ಅಧಿಕಾರಿ ವರ್ಗದವರೂ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗಾಗಿ ಯೋಗ ಒಂದು ಪರಿಣಾಮಕಾರಿ ಸಾಧನ. ಇಂದು ಅಂತರರಾಷ್ಟ್ರೀಯ ಯೋಗ ದಿನ. ಇಡೀ ಜಗತ್ತು ಭಾರತದ ಕೊಡುಗೆಯಾದ ಯೋಗದ ಮಹತ್ವವನ್ನು ಅರಿತು ಅನುಸರಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಭಾರತವು ಜಗತ್ತಿಗೆ ಪರಿಚಯಿಸಿದ ಅನನ್ಯ ಸಾಧನ ಯೋಗ. ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ ಸಾಧ್ಯ. ನಿತ್ಯ ಜೀವನಕ್ಕೆ ಬೇಕಿರುವ ಏಕಾಗ್ರತೆ, ಸಂಯಮ, ಒತ್ತಡ ನಿರ್ವಹಣೆಯ ಕೌಶಲ್ಯಗಳು ಯೋಗದಿಂದ ಲಭಿಸುತ್ತವೆ. ಯೋಗದ ಮೂಲಕ ರೋಗಮುಕ್ತವಾದ ನೆಮ್ಮದಿಯ ಬದುಕು ಕಂಡುಕೊಳ್ಳೋಣ ಎಂದೂ ಅವರು ಹೇಳಿದರು.

error: Content is protected !!