ಕಳೆದೆರಡು ದಿನಗಳಿಂದ ಮುಂಗಾರು ಪೂರ್ವ ಮಳೆ ಬಿಡುವು ನೀಡಿರುವುದರಿಂದ ಮಳೆಯಾಶ್ರಿತ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಬುಧವಾರ ಬೆಳ್ಳೂಡಿ ಸಮೀಪ ಶಿವಮೊಗ್ಗ ರಸ್ತೆ ಪಕ್ಕದ ಜಮೀನಿನಲ್ಲಿ ಬೆಳ್ಳೂಡಿ ರೈತರು ಏಕಕಾಲದಲ್ಲೇ ಟ್ರ್ಯಾಕ್ಟರ್ ಮೂಲಕ ಸಾಲು ಮಾಡಿದ ನಂತರ ಮಹಿಳೆಯರು ಮೆಕ್ಕೆಜೋಳ ಬಿತ್ತನೆ ಮಾಡಿ ಗೊಬ್ಬರ ಹಾಕಿದರು. ಇನ್ನೆರಡು ಟ್ರ್ಯಾಕ್ಟರ್‌ಗಳು ಬಿತ್ತನೆ ಮಾಡಿದ ಸಾಲುಗಳನ್ನು ಮುಚ್ಚುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು.
December 27, 2024