ದಾವಣಗೆರೆ, ಜೂ. 12 – ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಯನ್ನು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾ ಚಾರ್ಯ ಭಗವತ್ಪಾದರು ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ ದುರಂತ ಅಂತ್ಯಕ್ಕೆ ಕಾರಣವಾಗುತ್ತಿದೆ. ಸಾರ್ವಜನಿಕ ಜೀವನ ದಲ್ಲಿರುವವರು ಸಮಾಜಕ್ಕೆ ಮಾದರಿಯಾಗುವಂತೆ ನಡೆದುಕೊಳ್ಳ ಬೇಕು. ಬದಲಾಗಿ ಮೃಗೀಯವಾಗಿ ನಡೆದುಕೊಂಡು ಕುಟುಂಬಕ್ಕೆ ಆಧಾರವಾಗಿದ್ದ ಯುವಕನ ಪ್ರಾಣವನ್ನೇ ಬಲಿ ತೆಗೆದುಕೊಂಡಿ ರುವುದು ಖಂಡನೀಯ.
ರೇಣುಕಾಸ್ವಾಮಿ ಕುಟುಂಬದವರು ಉಜ್ಜಯಿನಿ ಪೀಠದ ಭಕ್ತರಾಗಿದ್ದು, ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಜಗದ್ಗುರುಗಳು ಸಾಂತ್ವನ ಹೇಳಿದ್ದಾರೆ.