ಸಾಂಸ್ಕೃತಿಕ ನಾಯಕ ಬಸವಣ್ಣನಿಗೆ ಶ್ರೇಯಸ್ಸು ಲಭಿಸಲಿ

ಸಾಂಸ್ಕೃತಿಕ ನಾಯಕ ಬಸವಣ್ಣನಿಗೆ ಶ್ರೇಯಸ್ಸು ಲಭಿಸಲಿ

ರಾಜಕೀಯ ನಾಯಕರು ಸಮಾಜದ ಸುಖ-ದುಃಖಕ್ಕೆ ಸ್ಪಂದಿಸಿ ; ಪಂಡಿತಾರಾಧ್ಯ ಶ್ರೀಗಳು

ಸಾಣೇಹಳ್ಳಿ, ಮೇ 16-  ರಾಜಕೀಯ ನಾಯಕರು ಹಾಗೂ ಮಠದ ಸ್ವಾಮಿಗಳು ಸಮಾಜದ ಸುಖ-ದುಃಖಗಳಲ್ಲಿ ಭಾಗಿಯಾದರೆ ಮಾತ್ರ ಸಾಂಸ್ಕೃತಿಕ ನಾಯಕ ಬಸವಣ್ಣನಿಗೆ ಶ್ರೇಯಸ್ಸು ಲಭಿಸಲಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.

ಇಲ್ಲಿನ ಎಸ್.ಎಸ್ ರಂಗಮಂದಿರದಲ್ಲಿ ಇತ್ತಿಚೇಗೆ ನಡೆದ ‘ಕಾಯಕ ದಿನಾಚರಣೆ ಮತ್ತು ‘ವಚನ ಸಂವಿಧಾನ’ ಗ್ರಂಥ ಲೋಕಾ ರ್ಪಣೆ ಕಾರ್ಯಕ್ರಮದಲ್ಲಿ  ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಇಂದಿನ ದಿನಮಾನಗಳಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ  ಕ್ಷೇತ್ರಗಳಲ್ಲಿ ಆಚಾರ ಕಡಿಮೆಯಾಗಿ ಅನಾಚಾರ ಜಾಸ್ತಿಯಾಗುತ್ತಿದೆ. ಆದ್ದರಿಂದ ನಾವೇ ಬದಲಾಗುವ ಮೂಲಕ ಅಂತರಾವಲೋಕನ ಮಾಡಿಕೊಂಡಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.

ಸಮಾಜದಲ್ಲಿ ಅನೇಕ ಒಕ್ಕೂಟಗಳಿದ್ದು, ಇವೆಲ್ಲವೂ ಬಸವ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿದರೆ ಎಲ್ಲ ಒಕ್ಕೂಟಗಳಿಗೆ ಅರ್ಥ ಬರುತ್ತದೆ ಮತ್ತು ಸರಕಾರವು ಬಸವ ತತ್ವಗಳನ್ನು ಸಮಾಜದಲ್ಲಿ ಹರಡಿಸಬೇಕು ಎಂದು ಆಶಿಸಿದರು.

ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ತೋಂಟದಾರ್ಯ ಸಿದ್ಧರಾಮ ಶ್ರೀಗಳು, ವಚನ ಸಾಹಿತ್ಯದಲ್ಲಿ  ಸಂವಿಧಾನದ ಆಶಯಗಳನ್ನು ಕಾಣಬಹುದು  ಮತ್ತು ಬಸವಣ್ಣನವರು 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದ್ದರು ಎಂದು ಹೆಮ್ಮೆ ಪಟ್ಟರು.

ಬಸವಾದಿ ಶರಣರು ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿದು ಸರ್ವರಿಗೂ ಗೌರವ ಭಾವನೆ ಹೇಳಿಕೊಟ್ಟಿದ್ದರು. ಆದ್ದರಿಂದ ಇಂದಿನ ಪ್ರತಿ ರಾಜಕೀಯ ನಾಯಕರು `ವಚನ ಸಂವಿಧಾನ ಗ್ರಂಥ’ ಓದಲೇ ಬೇಕು ಎಂದು ಆಶಯ ಪಟ್ಟರು.

ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಶ್ರೀಗಳು ಮಾತನಾಡಿ, ಸಮಾಜದಲ್ಲಿ  ಅಸಮಾನತೆಯನ್ನು ಹೊಡೆದೋಡಿಸುವ ಬಗ್ಗೆ ಗಮನಹರಿಸಬೇಕಿದೆ ಜತೆಗೆ ಧರ್ಮದ ನಡೆಗಳು ನುಡಿಗಳಿಗೆ ಸಿಮೀತವಾಗದೇ ನಡೆಯಲ್ಲಿರಬೇಕು ಎಂದ ಅವರು, ವಚನ ಸಾಹಿತ್ಯದ ಮೂಲಕ ಬದುಕು ಹಸನಗೊಳಿಸಿಕೊಳ್ಳಲು ಸಲಹೆ ನೀಡಿದರು.

ಶರಶ್ಚಂದ್ರ ಶ್ರೀಗಳು ಮಾತನಾಡಿ, ಶರಣ ಧರ್ಮದಲ್ಲಿ ಸಮಗ್ರ ಬದುಕಿನ ಬಗ್ಗೆ ಚಿಂತನೆ ಮಾಡುವುದು ಕಾಣಬಹುದು. ಬಸವಣ್ಣನವರು ಎಲ್ಲ ಆಯಾಮಗಳಿಂದ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಮೊದಲು ಸಂವಿಧಾನ ಕೊಟ್ಟವರೇ ಶರಣರು ಎನ್ನಬಹುದು ಎಂದರು.

ಲೇಖಕ ಎಚ್. ಬಿಲ್ಲಪ್ಪ ಮಾತನಾಡಿ, ಜೀವನದ ನಡಾವಳಿಯಲ್ಲಿ ಮನುಷ್ಯನ ಬದಲಾವಣೆ ನಶಿಸಿದೆ. ಮನುಷ್ಯ ಜನ್ಮ ಉನ್ನತಿಯಾಗಲು ವಚನ ಸಾಹಿತ್ಯದ ಕೃತಿ ಓದಬೇಕು. ಈ ನಿಟ್ಟಿನಲ್ಲಿ ನಮ್ಮ ಆಲೋಚನೆ ಬದಲಿಸಿಕೊಂಡರೆ ಮಾತ್ರ ನಮ್ಮ ಬದುಕು ಬದಲಾಯಾಗಲು ಸಾಧ್ಯ ಎಂದರು.

 ಗ್ರಂಥದ ಬಗ್ಗೆ ಗುರುಪಾದಪ್ಪ ಮರಿಗುದ್ದಿ, ಚಂದ್ರಶೇಖರ ತಾಳ್ಯ, ಶಿವನಕೆರೆ ಬಸವಲಿಂಗಪ್ಪ ಮಾತನಾಡಿದರು. 

ಚೆನ್ನಬಸವ ಸ್ವಾಮಿಗಳು ಮೋಟಗಿ ಮಠ ಅಥಣಿ ಸ್ವಾಗತಿಸಿದರು. ಎಚ್. ಎಸ್ ದ್ಯಾಮೇಶ್ ನಿರೂಪಿಸಿದರು. ರಾಜು ವಂದಿಸಿದರು.

ಈ ವೇಳೆ ಪುರುಷೋತ್ತಮಾನಂದಪುರಿ ಶ್ರೀಗಳು, ಶಾಂತವೀರ ಶ್ರೀಗಳು, ಈಶ್ವರಾನಂದಪುರಿ ಶ್ರೀಗಳು, ಮಾದಾರ ಚೆನ್ನಯ್ಯ ಶ್ರೀಗಳು, ದಾನೇಶ್ವರಿ ಮಾತಾಜಿ, ಬಸವರತ್ನ ಮಾತಾಜಿ, ರುದ್ರಮುನಿ ಸ್ವಾಮೀಜಿ, ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಶ್ರೀಗಳು, ಜಯ ಚಂದ್ರಶೇಖರ ಶ್ರೀಗಳು, ಶಿವಾನುಭವ ಚರಮೂರ್ತಿ ಶಿವರುದ್ರ ಶ್ರೀಗಳು, ಗುರುಬಸವದೇವರು, ಚಂದ್ರಶೇಖರ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಅಕ್ಕಮಹಾದೇವಿ ಮಾತಾಜಿ, ಗಂಗಾದೇವಿ ಮಾತಾಜಿ, ನಿಜಲಿಂಗ ದೇವರು ನಿಡಸೋಸಿ, ಗುರುಬಸವಪಟ್ಟದ್ದೇವರು, ಗುರುಮಹಾಂತ ಶ್ರೀಗಳು, ಬಸವರಾಜ ಪಟ್ಟದಾರ್ಯ ಶ್ರೀಗಳು,  ಬಸವಪ್ರಕಾಶ ಶ್ರೀಗಳು, ಬಸವ ಮಹಾಂತ ಶ್ರೀಗಳು, ಬಸವ ಮಹಾಲಿಂಗ ಶ್ರೀಗಳು, ಬಸವ ಮರುಳಸಿದ್ಧ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಜಯಮೃತ್ಯಂಜಯ ಶ್ರೀಗಳು, ಅಭಿನವ ಚೆನ್ನಬಸವ ಶ್ರೀಗಳು, ಗುರುಲಿಂಗ ಸ್ವಾಮೀಜಿ, ಇಮ್ಮಡಿ ಮಹಾಂತ ಸ್ವಾಮೀಜಿ, ಶರಣ ಬಸವದೇವರು, ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಸೇರಿದಂತೆ ಹಲವು ಶ್ರೀಗಳು ಇದ್ದರು.

error: Content is protected !!