ರೈತರ ಬೆಳೆ ನಷ್ಟ ಪರಿಹಾರದ ಬಾಕಿ 60.23 ಕೋಟಿ ವಿತರಣೆ

ರೈತರ ಬೆಳೆ ನಷ್ಟ ಪರಿಹಾರದ ಬಾಕಿ 60.23 ಕೋಟಿ ವಿತರಣೆ

ದಾವಣಗೆರೆ, ಮೇ 9- ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟವಾದ 82928 ರೈತರಿಗೆ ಬಾಕಿ  ಎರಡನೇ ಕಂತು  60.23 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ಬಾಕಿ ಇದ್ದ ರೈತರಿಗೆ ಒಟ್ಟು ರೂ. 60,23,46,380 ಗಳನ್ನು ನೇರವಾಗಿ ರೈತರ ಖಾತೆಗೆ ಪಾವತಿಸಲಾಗಿದೆ .   2023ರ ಮುಂಗಾರು ಹಂಗಾಮಿನಲ್ಲಿ  ಜಿಲ್ಲೆಯಲ್ಲಿ 1,50,621  ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಎಸ್‍ಡಿಆರ್ಎಫ್ ಹಾಗೂ ಎನ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ಅರ್ಹ ರೈತರಿಗೆ ಗರಿಷ್ಠ ರೂ.2000 ವರೆಗೆ 82928 ರೈತರಿಗೆ ರೂ.15,88,15,380 ಗಳನ್ನು ಮೊದಲ ಕಂತಾಗಿ ಪಾವತಿಸಲಾಗಿತ್ತು.

ಮೇ 2ರ ಸರ್ಕಾರದ ಆದೇಶದಂತೆ ಮಾರ್ಗ ಸೂಚಿನ್ವಯ ಪರಿಹಾರ ನೀಡಲು ಬಾಕಿ ಇದ್ದ ಮೊತ್ತವನ್ನು ಈಗ ಜಿಲ್ಲೆಯ 69575 ರೈತರಿಗೆ ರೂ.44,35,31,000 ಗಳನ್ನು  ನೇರವಾಗಿ ರೈತರ ಖಾತೆಗೆ ಪಾವತಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ ರೂ.60,23,46,381 ಗಳನ್ನು ಬೆಳೆ ಹಾನಿ ಪರಿಹಾರವಾಗಿ ನೀಡಲಾಗಿರುತ್ತದೆ.

ತಾಲ್ಲೂಕುವಾರು ವಿವರದನ್ವಯ ಚನ್ನಗಿರಿ ತಾಲ್ಲೂಕಿನ 16398 ರೈತರಿಗೆ ರೂ.3,07,12,576, ದಾವಣಗೆರೆ 17015 ರೈತರಿಗೆ ರೂ.3,22,94,548, ಹೊನ್ನಾಳಿ 8795 ರೈತರಿಗೆ ರೂ.1,66,55,292, ಜಗಳೂರು 27263 ರೈತರಿಗೆ ರೂ.5,36,64,034, ನ್ಯಾಮತಿ 9189 ರೈತರಿಗೆ ರೂ.1,74,61,001, ಹಾಗೂ ಹರಿಹರ ತಾಲ್ಲೂಕಿನ 4268 ರೈತರಿಗೆ ರೂ.80,27,929 ಗಳನ್ನು ಮೊದಲ ಕಂತಾಗಿ ಪಾವತಿಸಲಾಗಿದೆ.

ಜಿಲ್ಲೆಯಲ್ಲಿ ಬೆಳೆ ನಷ್ಟವಾದ ರೈತರಿಗೆ ಮೊದಲ ಕಂತಿನಲ್ಲಿ ಈಗಾಗಲೇ ಗರಿಷ್ಠ ರೂ.2000 ವರೆಗೆ ಪಾವತಿಸಲಾಗಿದ್ದು, ಬಾಕಿ ಪಾವತಿಸಬೇಕಾದ 69575 ರೈತರಿಗೆ ರೂ.44,35,37,000 ಪರಿಹಾರವನ್ನು ನೇರವಾಗಿ ಅವರ ಖಾತೆಗೆ ಈಗ ಪಾವತಿಸಲಾಗಿದೆ. 

ತಾಲ್ಲೂಕುವಾರು ವಿವರದನ್ವಯ  ಚನ್ನಗಿರಿ 12758 ರೈತರಿಗೆ ರೂ.6,50,30,311, ದಾವಣಗೆರೆ 13914 ರೈತರಿಗೆ ರೂ.8,34,19,466, ಹೊನ್ನಾಳಿ 7177 ರೈತರಿಗೆ ರೂ.3,87,43,550, ಜಗಳೂರು 24493 ರೈತರಿಗೆ ರೂ. 19,29,18,592, ನ್ಯಾಮತಿಯ 8025 ರೈತರಿಗೆ ರೂ.4,58,94,470, ಹಾಗೂ ಹರಿಹರ ತಾಲ್ಲೂಕಿನ 3208 ರೈತರಿಗೆ ರೂ.1,75,24,611 ಗಳನ್ನು ಈಗ ಪಾವತಿಸಿದೆ.

ಯಾವುದೇ ರೈತರಿಗೆ ಬೆಳೆ ಪರಿಹಾರ ಕುರಿತಂತೆ ಮಾಹಿತಿ ಮತ್ತು ಮಾರ್ಗಸೂಚಿ ಬಗ್ಗೆ ವಿವರ ನೀಡಲು ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕರೆ ಮಾಡಬಹುದಾಗಿದೆ.

ಸಹಾಯವಾಣಿ ಸಂಖ್ಯೆಗಳು: ಚನ್ನಗಿರಿ.ತಾ. ಮೊ.ಸಂ:7892481962, ದಾವಣಗೆರೆ, ಮೊ.ಸಂ:9731254380, ಹೊನ್ನಾಳಿ.ತಾ. ಮೊ.ಸಂ:9686136015, ಜಗಳೂರು.ತಾ. ಮೊ.ಸಂ:8431977870, ನ್ಯಾಮತಿ.ತಾ. ಮೊ.ಸಂ:8073951245, ಹರಿಹರ.ತಾ.ಮೊ.ಸಂ:8618868370 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.

error: Content is protected !!