ಮತದಾನ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲೆಯಾದ್ಯಂತ 63 ವಿಶೇಷ ಮತಗಟ್ಟೆಗಳ ಸ್ಥಾಪನೆ
ದಾವಣಗೆರೆ, ಮೇ 6 – 18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಪ್ರಜಾಪ್ರಭುತ್ವದ ಮತದಾನ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲೆಯಾದ್ಯಂತ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾರರನ್ನು ಆಕರ್ಷಿಸಲಾಗುತ್ತಿದೆ.
ವಿಶೇಷ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಗಳಿಂದಲೇ ನಿರ್ವಹಿಸಲ್ಪಡುವ ಸಖಿ ಮತಗಟ್ಟೆ ಇವು ಜಿಲ್ಲೆಯಲ್ಲಿ 35 ಮತಗಟ್ಟೆಗಳು, ಧ್ಯೇಯ ಆಧಾ ರಿತ ಮತಗಟ್ಟೆಗಳಲ್ಲಿ ಅಡಿಕೆ, ಕೃಷಿ, ವೀಳ್ಯೆದೆಲೆ, ಸಂಚಾರ ನಿಯಂತ್ರಣ, ಜಲ ಸಂರಕ್ಷಣೆ, ಸ್ಕೌಟ್ಸ್ ಅಂಡ್ ಗೈಡ್ಸ್, ಅರಣ್ಯ, ಅಂಗನವಾಡಿ, ಸಾಂಪ್ರದಾ ಯಿಕ ಮತಗಟ್ಟೆಗಳಲ್ಲಿ ಪರಿಸರ ಸ್ನೇಹಿ, ಲಂಬಾಣಿ ಸಂಸ್ಕೃತಿ, ಯಾದವ ಸಂಪ್ರದಾಯ, ಹಕ್ಕಿಪಿಕ್ಕಿ ಸಂಪ್ರದಾಯ ಸೇರಿದಂತೆ ಜನ ಜೀವನದ ಬಗ್ಗೆ ಗಮನ ಸೆಳೆಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಯುವಕರಿಂದ ನಿರ್ವಹಿಸಲ್ಪಡುವ ಯುವ ಮತಗಟ್ಟೆಗಳು, ವಿಶೇಷಚೇತನರಿಂದ ನಿರ್ವಹಿಸಲ್ಪ ಡುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಸಾಂಪ್ರದಾಯಿಕ ಮತಗಟ್ಟೆ :
ದಾವಣಗೆರೆ ದಕ್ಷಿಣ ಕ್ಷೇತ್ರದ ಮತಗಟ್ಟೆ 169ರ ಜಾಲಿನಗರದ ಜನತಾ ವಿದ್ಯಾಲಯದಲ್ಲಿ ಪರಿಸರ ಸ್ನೇಹಿಗೆ ಒತ್ತು ನೀಡಲಾಗಿದೆ. ಇಲ್ಲಿ ಬಿಸಿಲಿಗೆ ತಂಪಾಗಿರಲು ಮಣ್ಣಿನಿಂದ ಮಾಡಿದ ಮನೆ, ಛಾವಣಿ ಮೇಲೆ ತೆಂಗಿನ ಗರಿ, ಮಣ್ಣಿನಿಂದ ಮಡಿಕೆ ತಯಾರಿಸುವ ಟಿಗರಿ, ಉಪಯೋಗಿಸುವ ಮಡಿಕೆಗಳ ಪ್ರದರ್ಶನ, ಬಾವಿಯ ಸಂರಕ್ಷಣೆ, ಪಕ್ಷಿಗಳಿಗೆ ನೀರುಣಿಸುವುದು, ಪ್ಲಾಸ್ಟಿಕ್ ಬದಲಾಗಿ ಬಿದಿರಿನಿಂದ ತಯಾರಿಸಿದ ಬೀಸಣಿಕೆ, ಬುಟ್ಟಿಗಳ ಉಪಯೋಗ, ಪ್ಲಾಸ್ಟಿಕ್ ಬ್ಯಾಗ್ ಬದಲಾಗಿ ಬಟ್ಟೆ ಬ್ಯಾಗ್ಗಳ ಉಪಯೋಗ ಮಾಡುವ ಮೂಲಕ ಪರಿಸರ ಸಂರಕ್ಷಣೆ ವಿಷಯಾಧಾರಿತ ಮತಗಟ್ಟೆಯಾಗಿದೆ. ಇದನ್ನು ಚಿತ್ರಕಲಾ ಪರಿಷತ್ ಕಲಾವಿದರು ನಿರ್ಮಾಣ ಮಾಡಿರುವರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ರಕ್ಷಣಾಧಿ ಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರುಗಳು ಮತಗಟ್ಟೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಸಖಿ ಮತಗಟ್ಟೆಗೆ ಭೇಟಿ :
ದಾವಣಗೆರೆ ಉತ್ತರದ ಎಂ.ಸಿ.ಸಿ. ಬಿ.ಬ್ಲಾಕ್ನಲ್ಲಿನ ಮತಗಟ್ಟೆ 208ರಲ್ಲಿ ಸಖಿ ಮತಗಟ್ಟೆ ಯನ್ನು ಸ್ಥಾಪಿಸಿದ್ದು, ಇಲ್ಲಿ ಪಿಆರ್ಓ, ಎಪಿಆರ್ಓ, ಮತಗಟ್ಟೆ ಸಿಬ್ಬಂದಿಗಳು ಮಹಿಳೆಯರೇ ಆಗಿರು ತ್ತಾರೆ. ಇಲ್ಲಿ 656 ಪುರುಷ, 671 ಮಹಿಳಾ ಮತದಾರರು ಸೇರಿ 1327 ಮತದಾರರಿದ್ದಾರೆ.
ದಾವಣಗೆರೆ ಉತ್ತರದ ಬೇತೂರು ಗ್ರಾಮ ಪಂಚಾಯತ್ನಲ್ಲಿನ 2 ರ ಸಖಿ ಮತಗಟ್ಟೆಯಲ್ಲಿ 564 ಪುರುಷ, 593 ಮಹಿಳಾ ಮತದಾರರು ಸೇರಿ 1157 ಮತದಾರರಿದ್ದಾರೆ.
ಇಲ್ಲಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ, ವೀಕ್ಷಣೆ ಮಾಡಿ ಸಿದ್ದತೆಗಳ ಪರಿಶೀಲನೆ ನಡೆಸಿದರು.
ವಿಶೇಷ ಮತಗಟ್ಟೆಗಳ ವಿವರ :
ಜಗಳೂರು ತಾಲ್ಲೂಕಿನ ಮುಸ್ಟೂರು 238ನೇ ಮತಗಟ್ಟೆಯಲ್ಲಿ ಧ್ಯೇಯ ಮಾದರಿ ಜಲಾನಯನ ಪ್ರಾತ್ಯಕ್ಷಿತೆ, ಮಳೆ ನೀರು ಸಂರಕ್ಷಣೆ ಮಾಡುವ ಬಗ್ಗೆ ವಿವರಿಸಲಾಗಿದೆ.
ದಾವಣಗೆರೆ ದಕ್ಷಿಣದ ಮತಗಟ್ಟೆ 139ರಲ್ಲಿ ಜಯದೇವ ಹಾಸ್ಟೆಲ್, ಹನಗೋಡಿಮಠ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿ ಮೆಕ್ಕೆಜೋಳದ ಸ್ವಾಗತದ ಕಮಾನು ನಿರ್ಮಾಣ, ಕೃಷಿ ಮಾಹಿತಿಯುಳ್ಳ ಫಲಕಗಳ ಅನಾವರಣ ಮಾಡಲಾಗಿದೆ.
ಹೊನ್ನಾಳಿ ತಾಲ್ಲೂಕಿನ ಆಂಜನೇಯಪುರದಲ್ಲಿ ಲಂಬಾಣಿ ಸಾಂಪ್ರದಾಯಿಕ ಮತಗಟ್ಟೆ, ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿಯಲ್ಲಿ ಅಕ್ಕಿಪಿಕ್ಕಿ ಜನಾಂಗದ ಮತಗಟ್ಟೆ, ದಾವಣಗೆರೆ ನಗರದ ನೀರಾವರಿ ಇಲಾಖೆ ಮತಗಟ್ಟೆ 201ರಲ್ಲಿ ಸಂಚಾರಿ ನಿಯಮಗಳ ಜಾಗೃತಿಯುಳ್ಳ ಮತಗಟ್ಟೆ, ಹರಿಹರದಲ್ಲಿ ವೀಳ್ಯೆದೆಲೆ, ಚನ್ನಗಿರಿ ಪಟ್ಟಣದಲ್ಲಿ ಅಡಿಕೆ ಬೆಳೆ ಕುರಿತಂತೆ ಮತಗಟ್ಟೆಗಳನ್ನು ವಿಶೇಷವಾಗಿ ಸಿದ್ದಪಡಿಸಲಾಗಿದೆ.