ನುಡಿದಂತೆ ನಡೆದಿದ್ದೇವೆ, ನಡೆಯುತ್ತೇವೆ, ಇದು ನಮ್ಮ ಗ್ಯಾರಂಟಿ

ನುಡಿದಂತೆ ನಡೆದಿದ್ದೇವೆ, ನಡೆಯುತ್ತೇವೆ, ಇದು ನಮ್ಮ ಗ್ಯಾರಂಟಿ

ಹರಿಹರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಬಿರುಸಿನ ಪ್ರಚಾರ

ಮಲೇಬೆನ್ನೂರು, ಏ.22- ನಾವು ನುಡಿದಂತೆ ನಡೆದಿದ್ದೇವೆ, ನಡೆಯುತ್ತೇವೆ ಇದು ನಮ್ಮ ಗ್ಯಾರಂಟಿ. ಕಾಂಗ್ರೆಸ್ ಸರ್ಕಾರ ಎಂದರೇ ಗ್ಯಾರಂಟಿ ಎಂದು  ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದರು. 

ಸೋಮವಾರ ಹರಿಹರ ತಾಲ್ಲೂಕಿನ  ಕುಣೆಬೆಳಕೆರೆ ಗ್ರಾಮದಿಂದ ಪ್ರಚಾರ ಆರಂಭಿಸಿದ ಅವರು, ನಂತರ ನಂದಿತಾವರೆ, ಭಾಸ್ಕರರಾವ್ ಕ್ಯಾಂಪ್, ವಿನಾಯಕ ನಗರ, ಜಿಗಳಿ, ಕುಂಬಳೂರು, ನಿಟ್ಟೂರು, ಆದಾಪುರ, ಬೂದಿಹಾಳು, ನೆಹರು ಕ್ಯಾಂಪ್, ಗುಳದಹಳ್ಳಿ, ಸಂಕ್ಲೀಪುರ, ಮಲ್ಲನಾಯಕನ ಹಳ್ಳಿ, ಹರಳಹಳ್ಳಿ, ಹಾಲಿವಾಣ, ಕೊಪ್ಪ, ದಿಬ್ಬದಹಳ್ಳಿ, ಕೊಮಾರನಹಳ್ಳಿ ಗ್ರಾಮ ಗಳಲ್ಲಿ ಪ್ರಚಾರ ಕಾರ್ಯ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಈ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಯೋಜನೆಗಳನ್ನು ಜಾರಿಗೆ ತಂದು ಇಂದು ಹರಿಹರ ವಿಧಾನಸಭಾ ಕ್ಷೇತ್ರವೊಂದಕ್ಕೆ ಸುಮಾರು ರೂ.168 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿವಿಧ ರೂಪದಲ್ಲಿ ನೀಡಿದೆ.

ಅದೇ ರೀತಿ ನಮ್ಮ ಸರ್ಕಾರ ಉದ್ಯೋಗದ ಭರವಸೆ ನೀಡಿದ್ದು, ಈಗಾಗಲೇ ಸಾವಿರಾರು ಉದ್ಯೋಗಗಳನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ಸೃಷ್ಟಿಸಲಾಗಿದ್ದು, ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇನ್ನು ಹರಿಹರದಲ್ಲಿಯೂ ಸಹ ಕಾರ್ಖಾನೆಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದು ಪ್ರಭಾ ಮತದಾರರಿಗೆ ಭರವಸೆ ನೀಡಿದರು.

ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ಪ್ರಧಾನಿ ಮೋದಿ ಅವರ ಬಣ್ಣದ ಮಾತುಗಳಿಗೆ ಈ ಹಿಂದೆ ಜನ ಮೋಸ ಹೋಗಿದ್ದಾರೆ. ಇನ್ಮುಂದೆ ಅವರ ಮೋಡಿ ನಡೆಯಲ್ಲ. ದೇಶದಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳನ್ನು ಈ ಬಾರಿ ಅಧಿಕಾರಕ್ಕೆ ತರುವ ತೀರ್ಮಾನವನ್ನು ಜನ ಮಾಡಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಹರಿಹರ ಸೇರಿದಂತೆ ಎಲ್ಲಾ ತಾಲ್ಲೂಕಿನಲ್ಲೂ ಡಾ ಪ್ರಭಾ ಮಲ್ಲಿಕಾರ್ಜುನ್ ಪರ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದ್ದು ಅವರು ದಾಖಲೆ ಮಟ್ಟದಲ್ಲಿ ಗೆಲುವು ಸಾಧಿಸಲಿದ್ದು ಹರಿಹರ ಕ್ಷೇತ್ರದಲ್ಲಿ ಅಭಿವೃದ್ಧಿ ಗಾಳಿ ಬೀಸಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಮಾಜಿ ಸಚಿವ ಡಾ. ವೈ ನಾಗಪ್ಪನವರ ಪುತ್ರಿ ಡಾ. ರಶ್ಮಿ ಮಾತನಾಡಿ, ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡಲು ಜನ ಈಗಾಗ್ಲೆ ನಿರ್ಧರಿಸಿದ್ದು ಬಿಜೆಪಿಯ ಯಾವ ಆಟವೂ ನಡೆಯಲ್ಲ ಎಂದರು. ನಿಟ್ಟೂರಿನಲ್ಲಿ ಎನ್ ಜಿ ಶಿವಾಜಿ ಪಾಟೀಲ್, ಕೆ ಸಂಜೀವಮೂರ್ತಿ ಮತ್ತು ಗುಳದಹಳ್ಳಿಯಲ್ಲಿ ಚಂದ್ರಶೇಖರಯ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು.  

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್.ಬಕ್ಕೇಶ್, ಜಿ ಪಂ ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಎಂ. ನಾಗೇಂದ್ರಪ್ಪ, ಬಿ. ಎಂ. ವಾಗೀಶ್‍ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ಅಬೀದ್ ಅಲಿ, ಎಲ್ ಬಿ ಹನುಮಂತಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಮುಖಂಡರಾದ ಕುಂಬಳೂರು ವಿರೂಪಾಕ್ಷಪ್ಪ, ಜಿ ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ, ಸಿರಿಗೆರೆ ರಾಜಣ್ಣ, ಬಿ. ವೀರಯ್ಯ, ಡಾ ಬಿ ಚಂದ್ರಶೇಖರ್, ನಂದಿತಾವರೆ ತಿಮ್ಮನಗೌಡ, ಪಿ ರೇವಣಸಿದ್ದಪ್ಪ, ಸತ್ಯನಾರಾಯಣ, ಸಾಯಿ, ವೈ ದ್ಯಾವಪ್ಪರೆಡ್ಡಿ, ಸುರೇಶ್ ಹಾದಿಮನಿ, ಹನಗವಾಡಿ ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಎಸ್ ಜಿ ಪರಮೇಶ್ವರಪ್ಪ, ಕೆ.ಪಿ. ಕುಮಾರಸ್ವಾಮಿ, ಕುಣೆಬೆಳಕೆರೆ ಬಸವರಾಜಪ್ಪ, ಗುತ್ತೂರು ಹಾಲೇಶಗೌಡ, ಮೇಕಾ ಮುರುಳಿಕೃಷ್ಣ, ಸಪ್ತಗಿರಿ ರಾಮಮೂರ್ತಿ,  ಮಲೇಬೆನ್ನೂರಿನ ಗೌಡ್ರ ಮಂಜಣ್ಣ, ಕಣ್ಣಾಳ್ ಹನುಮಂತಪ್ಪ, ಕಣ್ಣಾಳ್ ಧರ್ಮಣ್ಣ, ಕೆ. ಪಿ. ಗಂಗಾಧರ್, ಚಿಟ್ಟಕ್ಕಿ ನಾಗರಾಜ್, ಸೈಯದ್ ಜಾಕೀರ್, ಎಂ ಬಿ ಪೈಜು, ನಯಾಜ್, ಷಾ ಅಬ್ರಾರ್, ಖಲೀಲ್, ಸಜ್ಜು, ಬಣಕಾರ್ ವಿಜಯ್, ಪಿ ಆರ್ ಕುಮಾರ್, ಭೋವಿ ಕುಮಾರ್, ಪಿ ಹೆಚ್ ಶಿವಕುಮಾರ್, ಯೂನುಸ್, ಎಳೆಹೊಳೆ ಕುಮಾರ್, ಡಿ ಕೆ ಸಿದ್ದನಗೌಡ, ಕುಣೆಬೆಳಕೆರೆ ರುದ್ರಪ್ಪ ಸವಿತಾ ನಾಯ್ಕ್, ವಿದ್ಯಾ, ಜಿಗಳಿ ಕ್ಯಾಂಪ್ ಪ್ರಸಾದ್ ರಾವ್, ಜಿಗಳಿಯಲ್ಲಿ ತಾ ಪಂ ಮಾಜಿ ಅಧ್ಯಕ್ಷೆ ಹನುಮಮ್ಮ ದೇವೇಂದ್ರಪ್ಪ, ಗ್ರಾ ಪಂ ಸದಸ್ಯರಾದ ಡಿ ಎಂ ಹರೀಶ್, ಕೆ ಜಿ ಬಸವರಾಜ್, ಬೇವಿನಹಳ್ಳಿ ಶ್ರೀಕಾಂತ್, ಕುಕ್ಕವಾಡ ಮಂಜಣ್ಣ ತಿಮ್ಮೇನಹಳ್ಳಿ ರಾಜಣ್ಣ ಕುಂಬಳೂರು ಗ್ರಾ ಪಂ ಅಧ್ಯಕ್ಷೆ ಉಮಾದೇವಿ ಶಿವರಾಮಚಂದ್ರಪ್ಪ, ಕಣ್ಣಾಳ್ ನಾಗೇಂದ್ರ, ಆರ್. ಹೆಚ್. ಬಸವರಾಜ್, ಬಿ ಮೋಹನ್, ಹೆಚ್. ನಿಂಗಪ್ಪ, ಶಂಕರಗೌಡ, ನಿಟ್ಟೂರು ಕೆ. ಏಕಾಂತಪ್ಪ,  ಆದಾಪುರದಲ್ಲಿ ಜಿ ಪಂ ಮಾಜಿ ಸದಸ್ಯೆ ಹೇಮಾವತಿ ಭೀಮಪ್ಪ, ತಾ. ಪಂ. ಮಾಜಿ ಅಧ್ಯಕ್ಷರಾದ ವೀರಭದ್ರಪ್ಪ, ಮಂಜುನಾಥ್ ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!