ದೇಶದ ಉದ್ಧಾರಕ್ಕೆ ಬಿಜೆಪಿ ಪಕ್ಷ ಗೆಲ್ಲಿಸಬೇಕು

ದೇಶದ ಉದ್ಧಾರಕ್ಕೆ ಬಿಜೆಪಿ ಪಕ್ಷ ಗೆಲ್ಲಿಸಬೇಕು

ಹರಪನಹಳ್ಳಿ ತಾ.ನ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಮತಯಾಚನೆ

ಹರಪನಹಳ್ಳಿ, ಏ.17 – ನರೇಂದ್ರ ಮೋದಿ ಯವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು. ದೇಶದ ಉದ್ಧಾರಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು.  

ತಾಲೂಕಿನ ಹಿರೇಮೇಗಳಗೆರೆ,  ಸತ್ತೂರು, ಕಂಚಿಕೆರೆ, ಶಿಂಗ್ರಿಹಳ್ಳಿ, ರಾಗಿಮಸಲವಾಡ  ಗ್ರಾಮದಲ್ಲಿ ಮತ ಯಾಚನೆ ಮಾಡಿ ಅವರು ಮಾತನಾಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಅವರು ಕಳೆದ 20 ವರ್ಷಗಳಲ್ಲಿ ಹರಪನಹಳ್ಳಿ ತಾಲ್ಲೂಕಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ತಾಲ್ಲೂಕಿನ ಜನರ ಸೇವೆ ಮಾಡಲು ಈ ಬಾರಿ ನನಗೆ ಅವಕಾಶ ಸಿಕ್ಕಿದೆ. ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆ ಯಶಸ್ವೀ ಅನುಷ್ಟಾನ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಶ್ರಮಿಸುವುದಾಗಿ  ಅವರು ತಿಳಿಸಿದರು.

ನನ್ನ ಪತಿ‌ ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿದ ಅಭಿವೃದ್ದಿ  ನಮ್ಮ ಕೈ ಹಿಡಿಯುತ್ತಿದೆ.  ಕಳೆದ ಹತ್ತು ವರ್ಷಗಳಲ್ಲಿ ಯಾರೂ ಮಾಡದ ಅಭಿವೃದ್ಧಿ ಮೋದಿಜೀ ಮಾಡಿದ್ದಾರೆ.  ನನ್ನನ್ನು   ಗೆಲ್ಲಿಸಿದರೆ ಮೋದಿ ಅವರನ್ನು ಗೆಲ್ಲಿಸಿದಂತೆ ಎಂದರು.

ತಾಲ್ಲೂಕಿನ ಅನಂತಹಳ್ಳಿಯ ಬಳಿ ನಿರ್ಮಾಣ ವಾಗುತ್ತಿರುವ ಇಂಡಿಯನ್ ಭಾರತೀಯ ಸೇನೆಯ ಕಾಮಗಾರಿಗೆ  ಆದ್ಯತೆ ನೀಡಲಾಗುವುದು ಎಂದರು.

ಹರಪನಹಳ್ಳಿ ತಾಲ್ಲೂಕಿನಲ್ಲಿ  ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ ಹಾಗೂ ನನ್ನ ಪತಿ ಜಿ.ಎಂ.ಸಿದ್ದೇಶ್ವರ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮುಂದೆ ಹೆಚ್ಚಿನ ಅಭಿವೃದ್ಧಿ ಮಾಡಲು ಬಿಜೆಪಿಗೆ ಮತ ನೀಡಿ. ನೀವುಗಳು ನಮ್ಮನ್ನು ಹುಡುಕಿಕೊಂಡು ದಾವಣಗೆರೆಗೆ ಬರಬೇಡಿ, ನಿಮ್ಮ ಹರಪನಹಳ್ಳಿಯಲ್ಲಿ ಕಚೇರಿ ತೆರೆದು, ನಿಮ್ಮಗಳ ಸೇವೆ ಮಾಡಲು ಸದಾ ಸಿದ್ದರಿದ್ದೇವೆ ಎಂದರು.

ಮಾಜಿ ಶಾಸಕ ಕರುಣಾಕರ ರೆಡ್ಡಿ  ಮಾತನಾಡಿ,  ಇದು ಮಹತ್ವವಾದ ಚುನಾವಣೆಯಾಗಿದ್ದು   ಸ್ವಾತಂತ್ರ್ಯ ಬಂದ ನಂತರ ಆಡಳಿತ ಮಾಡಿದ ಕಾಂಗ್ರೆಸ್ ಸೇರಿದಂತೆ, ಇತರೆ ಪಕ್ಷಗಳು ಮಾಡದ ಕೆಲಸವನ್ನು ನರೇಂದ್ರ ಮೋದೀಜಿಯವರು ಹತ್ತು ವರ್ಷಗಳಲ್ಲಿ ಮಾಡಿದ್ದಾರೆ. ರೈತರಿಗೆ, ಬಡವರಿಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು  ಮಾಡುವ ಮೂಲಕ ಇಡೀ ವಿಶ್ವದಲ್ಲಿ ಉತ್ತಮ ಪ್ರಧಾನಿ ಎಂಬ ಹೆಸರು ಪಡೆದಿದ್ದಾರೆ.

ರಾಜೀವ್ ಗಾಂಧಿ ಹೇಳ್ತಾಯಿದ್ರು ಕೇಂದ್ರದಿಂದ 100 ರೂಪಾಯಿ ಬಿಡುಗಡೆ ಆದ್ರೆ ಫಲಾನುಭವಿಗೆ ತಲುಪೋದು ಕೇವಲ 10 ರೂ.ಗಳು  ಮಾತ್ರ ಅಂತ. ಅಂತಹ ಲೋಪವನ್ನು ತಪ್ಪಿಸಲು ಬಿಜೆಪಿ ಸರ್ಕಾರ ನೇರವಾಗಿ ಫಲಾನುಭವಿಗಳ ಖಾತೆಗೆ   ಹಾಕಲಾಗುತ್ತಿದೆ.   ಶ್ರೀಮಂತರಿಗೆ ಸಿಗುವ ಮೆಡಿಕಲ್ ಸೌಲಭ್ಯ ಬಡವರಿಗೂ ಸಿಗಬೇಕು ಅಂತ ಜನೌಷಧಿ ಯೋಜನೆ ಜಾರಿ ಮಾಡಲಾಗಿದೆ.  

ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯವಾಗಿದೆ. ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಕೊಡಲು ಆಗುತ್ತಿಲ್ಲ.  ನಾನು ಶಾಸಕನಿದ್ದಾಗ  ಐವತ್ತು ಕೆರೆಗಳಿಗೆ ನೀರು ತುಂಬಿಸುವ ಕೆಲಸ  ಸೇರಿದಂತೆ, ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದೇನೆ.  ಬಿಜೆಪಿ  ಬಡವರ ಕಲ್ಯಾಣಕ್ಕೆ ನೂರಾರು ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಹರಪನಹಳ್ಳಿ ಜನ ಬಿಜೆಪಿ ಅಭ್ಯರ್ಥಿಗೆ ವೋಟ್  ಹಾಕಿ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ  ಧನಂಜಯ್ ಕಡ್ಲೇಬಾಳು, ಲಕ್ಷ್ಮಿಪುರದ ವೆಂಕಟೇಶ ಆರ್. ನಾಯ್ಕ,  ಜಯಮ್ಮ, ಜಿ.ಎಸ್.ಅಶ್ವಿನಿ,  ಡಿ.ಲೋಕೇಶ್, ಶೇಖರಪ್ಪ, ಕಲ್ಲನಗೌಡ, ಮಂಜುನಾಥ್, ವೀರಭದ್ರಪ್ಪ, ಮಹಾಂತೇಶ್, ಬಸವರಾಜ್,  ಹೇಮಣ್ಣ, ಅಂಜಿನಪ್ಪ, ನಾಗರಾಜ್, ವೀರಣ್ಣ, ಕೆ.ಮಲ್ಲೇಶ. ಕಣಿವಿಹಳ್ಳಿ ಮಾರುತಿ  ಸೇರಿದಂತೆ, ಇತರರು ಇದ್ದರು

error: Content is protected !!