ಪ್ರಧಾನಿ ಮೋದಿಯಂತಹ ಶಕ್ತಿಯನ್ನು ಎದುರಿಸಲು ವಿಪಕ್ಷದವರಿಂದ ಸಾಧ್ಯವಿಲ್ಲ

ಪ್ರಧಾನಿ ಮೋದಿಯಂತಹ ಶಕ್ತಿಯನ್ನು ಎದುರಿಸಲು ವಿಪಕ್ಷದವರಿಂದ ಸಾಧ್ಯವಿಲ್ಲ

ಹರಪನಹಳ್ಳಿ, ಏ. 16- ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ದೊಡ್ಡ ಶಕ್ತಿ. ಈ ಶಕ್ತಿಯನ್ನು ಎದುರಿಸಲು ವಿಪಕ್ಷದವರಿಂದ ಸಾಧ್ಯ ವಿಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ತಾಲ್ಲೂಕಿನ ಕೆ. ಕಲ್ಲಹಳ್ಳಿ ಗ್ರಾಮದಲ್ಲಿ ಮಂಗ ಳವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನೀವು ಬಿಜೆಪಿಗೆ ಹಾಕುವ ಒಂದೊಂದು ಮತ ದೇಶದ ರಕ್ಷಣೆ, ಭದ್ರತೆ, ಶಿಕ್ಷಣ, ಮಹಿಳೆ ಯರ ಸಬಲೀಕರಣಕ್ಕೆ ಕಾರಣವಾಗಲಿದೆ ಎಂದರು.

ಕಾಂಗ್ರೆಸ್ 60 ವರ್ಷ ಅಧಿಕಾರ ನಡೆಸಿದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಆದರೆ ನರೇಂದ್ರ ಮೋದಿಯವರು ಕೇವಲ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಇನ್ನೂ ಹೆಚ್ಚು ಅಭಿವೃದ್ಧಿ ಆಗಲು ಬಿಜೆಪಿಗೆ ಮತ ನೀಡಿ ಎಂದು ಕೋರಿದರು.

ಮಾಜಿ ಶಾಸಕ ಜಿ. ಕರುಣಾಕರ ರೆಡ್ಡಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ದೇಶ ಅಭಿವೃದ್ದಿ ಆಗಲು ಸಾಧ್ಯ. ಆದ್ದರಿಂದ ನೀವೆಲ್ಲರೂ ಮತ್ತೊಮ್ಮೆ ಬಿಜೆಪಿಗೆ ಮತ ಹಾಕುವ ಮೂಲಕ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಹೇಳಿದರು.

ನಾನು ಕಳೆದ 21 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಶಾಸಕನಾಗಿ, ಸಚಿವನಾಗಿ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಸೋಲು-ಗೆಲುವಿನಲ್ಲಿ ನಿಮ್ಮ ಜೊತೆಗಿದ್ದೇನೆ ಎಂದು ತಿಳಿಸಿದರು.

ನಂತರ ಕೂಲಹಳ್ಳಿ, ಮಾಡ್ಲಿಗೇರಿ, ತೊಗರಿಕಟ್ಟೆ, ಕುಂಚೂರು, ಕೆ. ಕಲ್ಲಹಳ್ಳಿ, ನಿಟ್ಟೂರು, ಹಲುವಾಗಲು, ಕಡತಿ ಸೇರಿ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಆರ್. ಲೋಕೇಶ್‌, ಮಂಜುನಾಥ ಆರ್.ನಾಯ್ಕ, ಯಡಿಹಳ್ಳಿ ಶೇಖರಪ್ಪ, ಎಂ. ಮಲ್ಲೇಶ್, ತಿಮ್ಮೇಶ, ಪುರಸಭೆ ಮಾಜಿ ಸದಸ್ಯೆ ವಿಜಯಲಕ್ಷ್ಮಿ, ಕಲ್ಲಹಳ್ಳಿ ಪರಸಪ್ಪ, ಹನುಮಂತಪ್ಪ, ಮೌನೇಶ, ಮಜ್ಜಿಗೇರಿ ನಿಂಗಪ್ಪ, ಅಜ್ಜಪ್ಪ, ದಿಳ್ಯೆಪ್ಪ, ಭೀಮಪ್ಪ, ಬಸವರಾಜನಾಯ್ಕ, ಹಂಪಾಪುರ ಬೀರಪ್ಪ, ಕೊಟ್ರೇಶ ನಾಯ್ಕ, ಬೇವಿನಹಳ್ಳಿ ಬಸವರಾಜ, ಮಲ್ಲಿಕಾರ್ಜುನ, ಇಟ್ಟಿಗುಡಿ ವಾಮಪ್ಪ, ರೂಪ್ಲಾನಾಯ್ಕ, ನಾಗರಾಜ ಪಾಟೀಲ್, ಸಿದ್ದೇಶ ರೆಡ್ಡಿ, ಸೂರ್ಯನಾಯ್ಕ, ಹಾಲಮ್ಮ, ಸುವರ್ಣಮ್ಮ, ಜಿ.ಎಂ. ರೇಖಾ, ಹನುಮಂತ, ಕೊಟ್ರೇಶ, ರಾಜಪ್ಪ, ಶೀಲ್ಯಾನಾಯ್ಕ ಸೇರಿದಂತೆ, ಇತರರು ಇದ್ದರು.

error: Content is protected !!