ಉದ್ಯೋಗ ಮಹಿಳೆಯ ಪ್ರಗತಿಗೆ ಪೂರಕ

ಉದ್ಯೋಗ ಮಹಿಳೆಯ ಪ್ರಗತಿಗೆ ಪೂರಕ

ಎ.ವಿ.ಕೆ. ಕಾಲೇಜಿನ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅನಿತಾ ದೊಡ್ಡಗೌಡರ್‌

ದಾವಣಗೆರೆ, ಮಾ. 27 – ಉದ್ಯೋಗ ಎಂಬುದು ಕೇವಲ ಅನ್ನಕ್ಕಾಗಿ ಅಲ್ಲ. ಉದ್ಯೋಗ ವ್ಯಕ್ತಿಯನ್ನು ಸಶಕ್ತಗೊಳಿಸುತ್ತದೆ. ಹೀಗಾಗಿ ಪ್ರತಿ ಯೊಬ್ಬ ಮಹಿಳೆಯೂ ಕಾಯಕದಲ್ಲಿ ತೊಡಗಿ ಜೀವ ನದಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಅನಿತಾ ಹೆಚ್. ದೊಡ್ಡಗೌಡರ್ ಕರೆ ನೀಡಿದರು.

ನಗರದ ಎ.ವಿ.ಕೆ. ಕಾಲೇಜಿನಲ್ಲಿ ಪ್ರತಿಮಾ ಸಭಾ  ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಮಹಿಳೆಯರಿಗೆ ಉದ್ಯೋಗ ಅನ್ನ ಹಾಗೂ ಸಮಾನತೆ ನೀಡುತ್ತದೆ. ಇದರ ಜೊತೆಗೆ, ಪ್ರತಿನಿತ್ಯ ಕಾಯಕದಲ್ಲಿ ಮನಸ್ಸು ಲೀನ ಗೊಳಿಸಿದಾಗ ಇತರೆ ವ್ಯಸನಗಳು ಕಾಡುವು ದಿಲ್ಲ. ಸಮಯ ಪೋಲು ಮಾಡುವುದು ತಪ್ಪುತ್ತದೆ. ಹೀಗಾಗಿ ಉದ್ಯೋಗಂ ಸರ್ವ ಲಕ್ಷಣಂ ಎಂಬ ಮಾತು ಸೂಕ್ತವಾಗಿದೆ ಎಂದು ದೊಡ್ಡಗೌಡರ್ ತಿಳಿಸಿದರು.

ಮಹಿಳೆಯಿಂದ ಕುಟುಂಬ ಪ್ರಗತಿಯಾಗು ತ್ತದೆ. ಕುಟುಂಬಗಳು ಚೆನ್ನಾಗಿದ್ದರೆ ಸಮಾಜ ಹಾಗೂ ದೇಶದ ಪ್ರಗತಿಯಾಗುತ್ತದೆ. ಹೀಗಾಗಿ ಮಹಿಳೆಯೇ ಸಮಾಜದ ಕೇಂದ್ರ ಬಿಂದು ಎಂದವರು ವಿಶ್ಲೇಷಿಸಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬಾಪೂಜಿ ಶಿಕ್ಷಣ ಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ, ಕಲೆಯಿಂದ ಬದುಕಿಗೆ ಸಾಮರಸ್ಯ, ಸುಖ – ಶಾಂತಿ ಹಾಗೂ ನೆಮ್ಮದಿ ಸಿಗುತ್ತದೆ. ಕಲೆ – ಸಾಹಿತ್ಯದಲ್ಲಿ ಆಸಕ್ತಿ ಇದ್ದವರು ಸುಸಂಸ್ಕೃತರಾಗುತ್ತಾರೆ ಎಂದರು.

ಕಲೆಗಳಲ್ಲೇ ಅತ್ಯಂತ ಆನಂದ ನೀಡು ವುದು ನಾಟಕ. ಹೀಗಾಗಿಯೇ `ಕಾವ್ಯೇಶು ರಮ್ಯಂ ನಾಟಕಂ’ ಎಂಬ ಮಾತಿದೆ. ನಾಟಕಗ ಳನ್ನು ಆಸ್ವಾದಿಸುವ ಗುಣವನ್ನು ಬೆಳೆಸಿಕೊಳ್ಳ ಬೇಕು ಎಂದವರು ಕಿವಿಮಾತು ಹೇಳಿದರು.

ವೇದಿಕೆಯ ಮೇಲೆ ರಂಗ ನಿರ್ದೇಶಕರಾದ ಬಿ.ಎನ್. ಶಶಿಕಲಾ ಉಪಸ್ಥಿತರಿದ್ದರು. ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿದ್ದರು.

ಎಸ್.ಜಿ. ಪಲ್ಲವಿ ಪ್ರಾರ್ಥಿಸಿದರೆ, ಎ.ವಿ.ಕೆ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಣಧೀರ ಸ್ವಾಗತಿಸಿದರು. ಎಸ್.ಕೆ. ಸಹನಾ ನಿರೂಪಿಸಿದರೆ, ಸಹಾಯಕ ಪ್ರಾಧ್ಯಾಪಕಿ ಆರ್.ಜಿ. ಕವಿತ ವಂದಿಸಿದರು.

error: Content is protected !!