ಕಲ್ಯಾಣ ಶರಣರಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಸೇರಿದ್ದಾರೆ

ಕಲ್ಯಾಣ ಶರಣರಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಸೇರಿದ್ದಾರೆ

ದಾವಣಗೆರೆ, ಫೆ. 4 – 12ನೇ ಶತಮಾನದಲ್ಲಿ ಜಗತ್ತಿಗೆ ಕಾಯಕ ಶ್ರದ್ಧೆಯನ್ನು ಪರಿಚಯಿಸಿದವರು ಕಲ್ಯಾಣದ ಶರಣರು. ಅವರಲ್ಲಿ ಒಬ್ಬರು ನಿಜಶರಣ ಅಂಬಿಗರ ಚೌಡಯ್ಯ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ  ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ  ಶ್ರೀ ಮಹಾಯೋಗಿ ವೇಮನ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಜಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿಯೇ ಜಾತೀಯತೆ ಮತ್ತು ಮೌಢ್ಯತೆಯನ್ನು ಖಂಡಿಸಿ ತಮ್ಮ ಹೆಸರನ್ನೇ ಅಂಕಿತ ವನ್ನಾಗಿಟ್ಟುಕೊಂಡಿರುವ ವಿಭಿನ್ನ ವ್ಯಕ್ತಿತ್ವದ ಶ್ರೇಷ್ಠ ವಚನಾಕಾರರು. ಇವರ ವಚನದಲ್ಲಿನ ತತ್ವಾದರ್ಶಗಳು ಸಮಾಜಕ್ಕೆ ಇಂದಿಗೂ ಮಾದರಿ ಎಂದರು. 

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಮಾತನಾಡಿದರು.  ಕನ್ನಡ ಪ್ರಾಧ್ಯಾಪಕರಾದ ಸಾಲಿಮನಿ ಮಾರುತಿ ಉಪನ್ಯಾಸ ನೀಡಿದರು.

ಗಂಗಾಮತಸ್ಥರ ಸಮಾಜದ ಉಪಾಧ್ಯಕ್ಷ ಟಿ.ಮಂಜುನಾಥ, ಜಿಲ್ಲಾ ಗಂಗಾಮತಸ್ಥರ  ಸಮಾಜದ ನಿರ್ದೇಶಕ ಅಂಜಿನಪ್ಪ ಸಿ.ವಿ ಲೆಕ್ಕಾಪತ್ರಾಧಿಕಾರಿ ವೆಂಕಟೇಶ್, ರಶ್ಮಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!