ದಾವಣಗೆರೆ, ಸೆ. 1 – ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಸ್ಥಳೀಯ ಪಿ.ಜೆ. ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶುಕ್ರವಾರ ವಿಜೃಂಭಣೆಯ ರಥೋತ್ಸವ ನಡೆಯಿತು.
ಬೆಳಿಗ್ಗೆ ರಾಯರ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಅಲಂಕಾರ ನಡೆಯಿತು. ಮಠದ ಆವರಣದಲ್ಲಿ ಪಲ್ಲಕ್ಕಿ ಸೇವೆ ನಂತರ ರಥದಲ್ಲಿ ರಾಯರ ಬೃಂದಾವನ ಮತ್ತು ಪಾದುಕೆ ಹಾಗೂ ಪ್ರಹ್ಲಾದ ರಾಜರ ಮೂರ್ತಿ ಪ್ರತಿಷ್ಠಾಪಿಸಿ ಮಠದ ಬೀದಿಯಲ್ಲಿ ಮಂಗಳ ವಾದ್ಯ, ಭಜನೆಯೊಂದಿಗೆ, ಮಹಿಳೆಯರ ನೃತ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ರಥೋತ್ಸವದ ವೇಳೆ ಮಳೆಯ ಸಿಂಚನ ಭಕ್ತರಲ್ಲಿ ಹರ್ಷ ತಂದಿತು.
ರಥೋತ್ಸವದ ನಂತರ ನೈವೇದ್ಯ, ಭಕ್ತರಿಗೆ ತೀರ್ಥ ಪ್ರಸಾದ ಏರ್ಪಡಿಸಲಾಗಿತ್ತು. ಮಠದ ವ್ಯವಸ್ಥಾಪಕ ಸುತೀರ್ಥ ಕಟ್ಟಿ ಮತ್ತು ಕುಟುಂಬದವರು, ನಾಗರಾಜ್, ರಾಮಚಂದ್ರರಾವ್, ಪ್ರಕಾಶ್ ನಾಡಿಗೇರ್, ರಾಜಣ್ಣ,
ವಿಠ್ಠಲ್ ದಿದ್ದಿ, ಸುನಿಲ್, ವೃಷಭೇಂದ್ರ, ಸಮೀರ್ ದೇವಳೆ, ರಾಮು, ಸೀನು, ವ್ಯಾಸರಾಜ್, ಮೋಹನ್, ವಾದಿರಾಜ್ ಹಂದಿಗೋಳ್, ಶ್ರೀಕಾಂತ್ ಭಾದ್ರಿ, ಪೃಥ್ವಿ, ಮಧುಸೂದನ್, ಪ್ರಹ್ಲಾದ್, ಬಾದ್ರಿ ವಕೀಲರು ಹಾಗೂ ವಿಶ್ವ ಮಾಧ್ವ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಂದು ಶನಿವಾರ ಶ್ರೀ ಸತ್ಯನಾರಾಯಣ ಪೂಜೆ, ಧನ್ವಂತರಿ ಹೋಮ ಪ್ರವಚನದ ಮಂಗಳ ಮಹೋತ್ಸವ ನಡೆಯಲಿದೆ.
ಕೆ.ಬಿ. ಬಡಾವಣೆಯಲ್ಲಿರುವ ರಾಯರ ಮಠದಲ್ಲಿ ಶುಕ್ರವಾರ ಸಂಜೆ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಗಳು ನಡೆದವು.