ದಾವಣಗೆರೆ ದಿಕ್ಷೀತ್ ರಸ್ತೆ, 2ನೇ ಕ್ರಾಸ್ ವಾಸಿ ಮತ್ತು ಗೀತಾ ಟೆಕ್ಸ್ಟೈಲ್ಸ್ ಮಾಲೀಕರಾದ ಶ್ರೀ ರವೀಂದ್ರ ಕುಂಟೆ ಇವರು, ದಿನಾಂಕ 20.02.2025ರ ಗುರುವಾರ ಬೆಳಗಿನ ಜಾವ 3.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 68 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 20.02.2025ರ ಗುರುವಾರ ಸಂಜೆ 5 ಕ್ಕೆ ಪಿ.ಬಿ. ರಸ್ತೆಯ ವೈಕುಂಠಧಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ರವೀಂದ್ರ ಕುಂಟೆ
