ದಾವಣಗೆರೆ, ಎಂಸಿಸಿ ಬಿ ಬ್ಲಾಕ್ ವಾಸಿ ಔಷಧಿ ವಿತರಕರಾದ ಎನ್.ಬಿ ಸಿದ್ದರಾಮಯ್ಯ ನಾಗರಾಳ್ ಇವರ ಧರ್ಮಪತ್ನಿ ಶ್ರೀಮತಿ ಶೋಭಾ (60) ಇವರು ದಿನಾಂಕ 6.9.2024ರ ಬೆಳಿಗ್ಗೆ 12.15ಕ್ಕೆ ನಿಧನರಾದರು. ಪುತ್ರ ಡಾ. ಎನ್.ಎಸ್. ಶರತ್ ಕುಮಾರ್, ವೈದ್ಯರು, ಬಾಪೂಜಿ ಡೆಂಟಲ್ ಕಾಲೇಜು. ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ಎಂಸಿಸಿ ಬಿ ಬ್ಲಾಕ್ನ ಮೃತರ ಸ್ವಗೃಹದಲ್ಲಿ ಬೆಳಿಗ್ಗೆ 9.30ರವರಗೆ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ನಂತರ ಅಂತ್ಯಕ್ರಿಯೆಯು ದಿನಾಂಕ 6.9.2024ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಅರಸಿಕೆರೆ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024