ದಾವಣಗೆರೆ ಸಿಟಿ ವಿನೋಬ ನಗರ ವಾಸಿ, ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಆರ್. ಪುಟ್ಟಪ್ಪ ಇವರು ದಿನಾಂಕ 21.5.2024ರ ಮಂಗಳವಾರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 71 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.5.2024ರ ಬುಧವಾರ ಸಂಜೆ 4 ಕ್ಕೆ ದಾವಣಗೆರೆ ತಾಲ್ಲೂಕು ಆರನೇ ಮೈಲಿಕಲ್ಲು ಬಳಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹೆಚ್. ಆರ್. ಪುಟ್ಟಪ್ಪ
