ದಾವಣಗೆರೆ ತಾಲ್ಲೂಕು ಹೊಸ ಕಡ್ಲೇಬಾಳ್ ಗ್ರಾಮದ ವಾಸಿ ಶ್ರೀಮತಿ ಮಲ್ಲಮ್ಮನವರ ಪತಿ ಶ್ರೀ ಗೌಡ್ರು ಹಾಲಪ್ಪನವರು ದಿನಾಂಕ 26-04-2024ರ ಶುಕ್ರವಾರ ಸಂಜೆ 7-20 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 84 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 27-04-2024ರ ಶನಿವಾರ ಬೆಳಿಗ್ಗೆ 12 ಗಂಟೆಗೆ ಕಡ್ಲೇಬಾಳ್ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಗೌಡ್ರು ಹಾಲಪ್ಪ
