ಮಕ್ಕಳಲ್ಲಿ ಸಂಗೀತ, ನಾಟ್ಯ, ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸುವಂತೆ ಪ್ರೇರೇಪಿಸಿ

ಮಕ್ಕಳಲ್ಲಿ ಸಂಗೀತ, ನಾಟ್ಯ, ಕ್ರೀಡೆಗಳಲ್ಲಿ  ಆಸಕ್ತಿ ಮೂಡಿಸುವಂತೆ ಪ್ರೇರೇಪಿಸಿ

ದಾವಣಗೆರೆ, ಫೆ.3- ಮಕ್ಕಳಲ್ಲಿ ಮೊಬೈಲ್ ಗೀಳು ಬೆಳೆಸದೇ ಸಂಗೀತ, ನಾಟ್ಯ, ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸುವ ಜೊತೆಗೆ ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಪೋಷಕರದ್ದಾಗಿದೆ ಎಂದು ಎಸ್.ಎಸ್. ಕೇರ್ ಟ್ರಸ್ಟ್ ಲೈಪ್ ಟ್ರಸ್ಟಿ, ಬಾಪೂಜಿ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರದ 64 ನೇ ವಾರ್ಷಿಕ ಮಹೋತ್ಸವ ಹಾಗೂ ಹೆಜ್ಜೆ-ಗೆಜ್ಜೆಗಳ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ಕೇವಲ ಓದಿಗಷ್ಟೇ ಪ್ರೇರೇಪಿಸದೇ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ತಂದೆ-ತಾಯಿಗಳೊಂದಿಗೆ ಉತ್ತಮ ಬಾಂಧವ್ಯ ಏರ್ಪಡುವಂತೆ ನೋಡಿಕೊಳ್ಳಬೇಕು. ನಿತ್ಯ ಮಕ್ಕಳಿಗಾಗಿ ಅಮೂಲ್ಯ ಸಮಯವನ್ನು ಮೀಸಲಿಡುವಬೇಕೆಂದು ಪೋಷಕರಿಗೆ ಸಲಹೆ ನೀಡಿದರು.

ತಂದೆ-ತಾಯಂದಿರು ಜ್ಞಾನದ ಸೇತುವೆಯಾಗಿ ಕರ್ತವ್ಯ ನಿರ್ವಹಿಸಬೇಕು. ಮಕ್ಕಳಲ್ಲಿ ಹೆಣ್ಣು-ಗಂಡೆಂಬ ಭೇದವನ್ನು ಮಾಡದೇ ಸಮನಾಗಿ ಕಾಣಬೇಕು ಎಂದು ಹೇಳಿದರು.

ಬಹಳಷ್ಟು ಶಾಲೆಗಳಲ್ಲಿ ಪಠ್ಯಕ್ಕೆ ನೀಡಿದ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೆ ನೀಡದಿರುವುದನ್ನು ಕಾಣುತ್ತೇವೆ. ಸಂಗೀತ, ಕಲೆ, ಸಾಹಿತ್ಯ, ನೃತ್ಯ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು ಮತ್ತು ಏಕಾಗ್ರತೆಯನ್ನು ಕಲಿಯುತ್ತೇವೆ ಎಂದರು.

ಯಾರು ಓದಿನ ಜೊತೆ ಶಿಕ್ಷಣದ ಪೂರಕ ಚಟುವಟಿಕೆಗಳಲ್ಲಿ ಭಾಗವಹಿಸು ತ್ತಾರೋ ಅವರು ಉತ್ತಮ ಅಂಕಗಳನ್ನು ಪಡೆದು ನಂ. 1 ವಿದ್ಯಾರ್ಥಿಗಳಾಗಿ ಹೊರಹೊಮ್ಮುತ್ತಾರೆ.  ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸದ ಮೇಲೆ ಅಭಿಮಾನ ಮೂಡಿಸಿಕೊಳ್ಳುತ್ತಾರೆಂದರು.

ವ್ಯಂಗ್ಯಚಿತ್ರಕಾರರೂ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್.ಬಿ. ಮಂಜುನಾಥ್ ಮಾತನಾಡಿ, ಮೊಬೈಲ್ ಬಳಕೆ ಕಡಿಮೆ ಮಾಡಿ, ಓದಿನ ಕಡೆ ಆಸಕ್ತಿ ಹೊಂದಿದರೆ ಮಕ್ಕಳಿಗೆ ಶಿಸ್ತುಬದ್ಧ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ಭಾರತೀಯ ಸಂಗೀತ, ನೃತ್ಯ ಕಲೆಗೆ ಪ್ರಪಂಚದಲ್ಲಿಯೇ ಪೂಜ್ಯನೀಯ ಭಾವನೆ ಇದೆ. ಇದು ದೈವೀ ಕಲೆಯಾಗಿದ್ದು, ಭಾರತೀಯ ಸಂಗೀತ, ನಾಟ್ಯ ಕಲೆಯನ್ನು ಅನೇಕ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಹಾಡು-ನೃತ್ಯ-ವಾದ್ಯಗಳ ಸಂಗಮವೇ ಸಂಗೀತ ಎಂದು ಹೇಳಿದರು.

ಪೋಷಕರು ಮಕ್ಕಳಿಗೆ ಸಂಗೀತ, ನೃತ್ಯ ಮತ್ತಿತರೆ ಕಲೆಗಳನ್ನು ಕಲಿಯಲು ಉತ್ತೇಜನ ನೀಡಬೇಕು. ಮಕ್ಕಳು ಕೂಡ ಸಂಸ್ಕಾರವಂತರಾಗಲು ಸಹಕಾರಿಯಾಗ ೈಲಿದೆ ಎಂದು ತಿಳಿಸಿದರು.

ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರದ ಅಧ್ಯಕ್ಷೆ ವಿದುಷಿ ರಜನಿ ರಘುನಾಥ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಭರತನಾಟ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಕಲಾಕೇಂದ್ರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕೆ.ಜಿ. ಕುಲಕರ್ಣಿ, ಶ್ರೀಕಾಂತ್ ಕುಲಕರ್ಣಿ, ಶ್ರೀನಿಧಿ ಕುಲಕರ್ಣಿ, ಕಲಾಂದಾನಿ, ಜಿ.ಜೆ. ಮೆಹಂಹಳೆ, ಬಿ.ವಿ. ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಕಲಾಕೇಂದ್ರದ ಮಕ್ಕಳಿಂದ ದೇವರ ನಾಮ ಸೇರಿದಂತೆ ವಿವಿಧ ಭರತನಾಟ್ಯ ಪ್ರಾಕಾರಗಳು ಪ್ರದರ್ಶನಗೊಂಡವು. 

error: Content is protected !!