ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniಮೇಷ ರಾಶಿ : (ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ಈ ವಾರ ನಿಮ್ಮ ಆದಾಯ ಮಧ್ಯಮ ಸ್ಥರದಲ್ಲಿರುವುದರಿಂದ ಯಾವುದೇ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹೋಗಬೇಡಿ. ನಿಮ್ಮ ನಡಾವಳಿಯಲ್ಲಿ ಕಂಡುಬರುವ ವ್ಯತ್ಯಾಸದಿಂದಾಗಿ ಬಂಧುಗಳು ದೂರವಾಗುವ ಸಂಭವವಿದೆ. ಅನಾವಶ್ಯಕ ಪ್ರಯಾಣವನ್ನು ಮಾಡಲೇ ಬೇಡಿ ಚಿಕ್ಕಮಕ್ಕಳನ್ನು ಸಾಕು ಪ್ರಾಣಿಗಳಿಂದ ದೂರವಿಡಿ, ಉದರ ಸಂಬಂಧಿ ಅನಾರೋಗ್ಯ ಸಮಸ್ಯೆ ಎದುರಾಗಬಹುದು, ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು. ಭಾನು-ಮಂಗಳ-ಗುರು-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniವೃಷಭ ರಾಶಿ : (ಇ.ಉ.ಎ.ಒ.ವ.ವಿ.ವು.ವೆ.ವೋ)

ಎಲ್ಲವನ್ನೂ ಋಣಾತ್ಮಕವಾಗಿ ನೋಡದೇ ತುಸು ಧನಾತ್ಮಕವಾಗಿಯೂ ನೋಡುವುದನ್ನು ಕಲಿಯಿರಿ, ಹಮ್ಮಿಕೊಂಡಿರುವ ಕೆಲಸ, ಕಾರ್ಯಗಳು ನಿಧಾನಗತಿಯಲ್ಲಿ ಸಾಗಿದರೂ ಯಶಸ್ವಿಯಾಗುವುದು, ಸೋದರನ ಮದುವೆ ಮಾತುಕತೆ ಕೆಲ ಕಾರಣಗಳಿಂದ ಮುಂದೆ ಹೋಗಲಿದೆ. ಸ್ಥಿರಾಸ್ಥಿ ಕೊಳ್ಳಲು ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳುವುವಿರಿ, ಕೌಟುಂಬಿಕ ಸಮಸ್ಯೆಯೊಂದಕ್ಕೆ ಧಾರ್ಮಿಕ ಕಟ್ಟಳೆಗಳು ಅಡ್ಡಿಯಾಗಲಿವೆ, ವಿದ್ಯಾರ್ಥಿಗಳಿಗೆ ಶುಭ ದಿನ. ಬುಧ-ಶುಕ್ರ-ಶನಿ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniಮಿಥುನ ರಾಶಿ : (ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಎಲ್ಲರಿಂದಲೂ ಗೌರವವನ್ನು ನಿರೀಕ್ಷಿಸುವ ನೀವು, ನಿಮ್ಮ ನಡಾವಳಿ ಹೇಗಿದೆ ಎಂಬುದಾಗಿ ಪರಾಮರ್ಶಿಸಿಕೊಳ್ಳಿ, ಸರ್ಕಾರದಿಂದಾಗಬೇಕಾಗಿರುವ ಕೆಲಸಗಳು ಮುಂದೆ ಹೋಗಲಿವೆ, ಹಾಗೆಂದ ಮಾತ್ರಕ್ಕೆ ಚಿಂತೆ ಬೇಡ, ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ವೆಚ್ಚವಾಗಲಿದೆ, ಸೋದರಿಯ ಮನೆಯಲ್ಲಿ ನಡೆಯಲಿರುವ ಶುಭ ಕಾರ್ಯಗಳಿಗೆ ಪರಿವಾರ ಸಮೇತ ಹೋಗಿ ಭಾಗವಹಿಸುವಿರಿ, ವಿದೇಶದಲ್ಲಿರುವ ಮಗನಿಂದ ಹಣಕಾಸಿನ ನೆರವನ್ನು ನಿರೀಕ್ಷಿಸುವಿರಿ. ಸೋಮ-ಬುಧ-ಗುರು-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniಕರ್ಕಾಟಕ ರಾಶಿ : (ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ವ್ಯಾವಹಾರಿಕವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವ ಮೊದಲು ಅನುಭವಿಗಳಾದ ಹಿರಿಯರ ನೆರವನ್ನು ಪಡೆಯಿರಿ, ಆಡಬಹುದಾದ ಮಾತಿನಲ್ಲಿ ಮಾರ್ದವತೆಯಿರಲಿ, ಆದಾಯವು ನಿರೀಕ್ಷಿತ ಮಟ್ಟದಲ್ಲಿರುವುದರಿಂದ ಹಣಕಾಸಿನ ಚಿಂತೆಬೇಡ, ಕೆಲವು ಕಾರ್ಯಗಳಿಗೆ ಬಂಧುಗಳ ನೆರವು ಅನಿವಾರ್ಯವಾಗಲಿದೆ, ಆಸ್ತಿ ವಿಭಾಗದ ವಿಚಾರದಲ್ಲಿ ಆತುರದ ನಿರ್ಧಾರಬೇಡ, ವೈಯಕ್ತಿಕ ಆರೋಗ್ಯವನ್ನು ಅಲಕ್ಷಿಸಬೇಡಿ, ಗೋ ಸೇವೆ ಮಾಡಿ. ಸೋಮ-ಮಂಗಳ-ಗುರು-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniಸಿಂಹ ರಾಶಿ : (ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ನನ್ನಿಂದಲೇ ಎಲ್ಲಾ ಎಂಬ ಅಹಮಿಕೆಯನ್ನು ಬಿಡುವುದು ಉತ್ತಮ, ದುರಹಂಕಾರದ ಮಾತು ದುಬಾರಿಯಾಗದಿರಲಿ, ಸ್ನೇಹಿತನ ಆಪತ್ತಿಗೆ ನೆರವಾಗುವ ಮೊದಲು ನಿಮ್ಮ ಇತಿಮಿತಿಯ ಅರಿವಿರಲಿ. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರಬೇಡ. ಮಹಿಳಾ ಉದ್ಯೋಗಿಗಳಿಗೆ ವೇತನದಲ್ಲಿ ಹೆಚ್ಚಳವಾಗುವುದರೊಂದಿಗೆ ಜವಾಬ್ದಾರಿಯೂ ಹೆಚ್ಚಲಿದೆ, ಕೌಟುಂಬಿಕ ಕಲಹಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಕದಡಲಿವೆ, ಗುರುಗಳನ್ನು ಆರಾಧಿಸಿ. ಭಾನು-ಸೋಮ-ಬುಧ-ಶುಭ ದಿನಗಳು

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniಕನ್ಯಾ ರಾಶಿ : (ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಆದಾಯದ ಮೂಲದಲ್ಲಿ ನಿರೀಕ್ಷಿತ ಹೆಚ್ಚಳವಿಲ್ಲದೇ ಇರುವುದರಿಂದ ಮಾಡುವ ಖರ್ಚು-ವೆಚ್ಚಗಳ ಮೇಲೆ ಹಿಡಿತ ಮಾಡುವುದು ಮೇಲು. ಮಡದಿ-ಮಕ್ಕಳ ಅನಗತ್ಯ ವಸ್ತುಗಳ ಖರೀದಿಯಿಂದ ಮನಸ್ಸಿಗೆ ಮುಜುಗುರವಾಗಲಿದೆ, ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳಿಂದಲೇ ಪದೊ ನ್ನತಿಗೆ ಅಡ್ಡಿಯಾಗಲಿದೆ, ರಾಜಕಾರಣಿಗಳು ವಿವಾದದಗಳಿಂದ ಮುಕ್ತಿ ಬಯಸಿದರೂ ಅದು ಅಷ್ಟು ಸುಲಭವಲ್ಲ, ಧನ-ಮಾನಹಾನಿ ಅನಿವಾರ್ಯವಾಗಲಿದೆ. ಗೋ ಸೇವೆಮಾಡಿ. ಮಂಗಳ-ಬುಧ-ಶುಕ್ರ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniತುಲಾ ರಾಶಿ : (ರ.ರಿ.ರು.ರೆ.ರೊ.ತ.ತಿ.ತು.ತೆ.)

ಈ ವಾರ ನೀವು ಮಾತ್ರವಲ್ಲದೆ ನಿಮ್ಮ ಪರಿವಾರದವರನ್ನೂ ಕೆಲಸ ಕಾರ್ಯಗಳಲ್ಲಿ ಚುರುಕುಗೊಳಿಸುವಿರಿ. ಧನ ಮದ ಅಮಲೇರದಂತಿರುವುದು ಉತ್ತಮ, ಅಧಿಕಾರಿ ವರ್ಗದವರು ಮಂತ್ರಿ ಮಹೋದರಿಂದ ತೀವ್ರ ಒತ್ತಡಕ್ಕೆ ಒಳಗಾಗುವರು, ನಿರುದ್ಯೋಗಿ ಪದವೀಧರರಿಗೆ ಸಾಧಾರಣ ವೇತನದ ಕೆಲಸ ಸಿಗಲಿದೆ, ರೈತಾಪಿ ಜನರಿಗೆ ಬಿಡುವಿಲ್ಲದ ಕೆಲಸವಾಗಲಿದ್ದು, ಹೈನುಗಾರಿಕೆ ಲಾಭ ದಾಯಕವಾಗಲಿದೆ. ಹಿರಿಯರಿಗೆ ಗೌರವ ಸಲ್ಲಲಿದೆ. ಕುಲ ದೇವತಾರಾಧನೆ ಮಾಡಿ. ಗುರು-ಶುಕ್ರ-ಶನಿ ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniವೃಶ್ಚಿಕ ರಾಶಿ : (ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ಎದುರಾಳಿ ಎಷ್ಟೇ ಬಲಿಷ್ಠನಾಗಿದ್ದರೂ ನಿಮ್ಮ ಚಾಣಾಕ್ಷತನಕ್ಕೆ ತಲೆ ಬಾಗಲೇಬೇಕು, ಹಣಕಾಸಿನ ಸ್ಥಿತಿಗತಿ ಮಧ್ಯಮ ಗತಿಯಲ್ಲಿದ್ದರೂ, ನಿಮ್ಮ ದೈನಂದಿನ ಬದುಕಿಗೇನೂ ತೊಂದರೆಯಿಲ್ಲ, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಯುವಕರು ತಮ್ಮ ನಡಾವಳಿಯಿಂದಾಗಿ ಕುಟುಂಬದ ನೆಮ್ಮದಿಯನ್ನು ಕದಡುವರು, ಪ್ರೇಮಿಗಳು ತಮ್ಮ ತಪ್ಪು ತಿಳುವಳಿಕೆಯಿಂದಾಗಿ ಭಿನ್ನಾಭಿಪ್ರಾಯ ತಾಳುವರು, ಸಾಧು ಸಜ್ಜನರ ದರ್ಶನ ಪಡೆಯುವಿರಿ. ಮಂಗಳ-ಗುರು-ಶುಕ್ರ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniಧನು ರಾಶಿ : (ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಈ ವಾರದ ಆರಂಭದಲ್ಲಿ ಹೆಚ್ಚಿನ ನೆಮ್ಮದಿ ಕಂಡು ಬಂದರೂ ಮಧ್ಯದಲ್ಲಿ ಅನೇಕ ಸಮಸ್ಯೆಗಳು ಬರಲಿವೆ, ಅವುಗಳನ್ನು ಜಾಣ್ಮೆಯಿಂದ ಹಾಗೂ ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ, ಪ್ರತಿಯೊಂದಕ್ಕೂ ಪರಾವಲಂಬಿಗಳಾಗು ವುದು ಅಷ್ಟು ಉಚಿತವಲ್ಲ, ಆದಾಯದಲ್ಲಿ ಹೆಚ್ಚಳ ಕಂಡುಬಂದರೂ, ಉಳಿತಾಯ ಮಾತ್ರ ಶೂನ್ಯ. ತೀರ್ಥಯಾತ್ರೆಗೆ ಹೊರಡುವ ಮುನ್ನ ಪೂರ್ವಸಿದ್ಧತೆ ಚೆನ್ನಾಗಿರಲಿ, ಹಿರಿಯರ ಕೋರಿಕೆಗಳನ್ನು ಬೇಗನೆ ಈಡೇರಿಸಿ. ಭಾನು-ಗುರು-ಶನಿ ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniಮಕರ ರಾಶಿ : (ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ನೀವು ಮಾಡಿ ಮುಗಿಸಲಿರುವ ಕೆಲಸ-ಕಾರ್ಯಗಳಲ್ಲಿ ನಿಮಗಿದ್ದ ಶ್ರದ್ಧೆ ಹಾಗೂ ಶ್ರಮಗಳನ್ನು ಮೇಲಾಧಿಕಾರಿಗಳು ಗುರುತಿಸಿ, ಪದೋನ್ನತಿಗೆ ಶಿಫಾರಸ್ಸು ಮಾಡುವರು. ಆದರೆ ಯಾರೊಂದಿಗೇ ಆಗಲಿ ಮಾತನಾಡುವಾಗ ತುಸು ಎಚ್ಚರದಿಂದಿರಿ, ಕಾರ್ಮಿಕ ವರ್ಗದವರಿಗೆ ಶ್ರಮಕ್ಕೆ ತಕ್ಕ ಪ್ರತಿ-ಫಲ ದೊರೆಯಲಿದೆ. ಮನೆಯಲ್ಲಿ ಅನಪೇಕ್ಷಿತ ವಿಚಾರಗಳನ್ನು ಹಿರಿಯರೊಂದಿಗೆ ಚರ್ಚಿಸಲು ಹೋಗಬೇಡಿ, ವಿಷ್ಣು ಸಹಸ್ರನಾಮ ಪಠಿಸಿ. ಸೋಮ-ಗುರು-ಶನಿ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniಕುಂಭ ರಾಶಿ : (ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ಬಂಧುಗಳೊಂದಿಗೆ ಕೋಪ-ತಾಪದಿಂದಾಡಿದ ಮಾತಿಗೆ ದೊಡ್ಡ ಬೆಲೆಯನ್ನೇ ತೆರಬೇಕಾದೀತು. ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ಶ್ರಮಪಡುವಿರಿ ಮತ್ತು ಇದರಲ್ಲಿ ಸಫಲರಾಗುವಿರಿ, ನಿವೃತ್ತಿಯಂಚಿನಲ್ಲಿರುವ ಉಪನ್ಯಾಸಕರಿಗೆ ಬೇಡಿಕೆ ಹೆಚ್ಚಲಿದೆ, ಬರಬೇಕಾಗಿರುವ ಬಾಕಿ ಹಣ ಸಕಾಲದಲ್ಲಿ ಕೈಸೇರಿ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ವಿದೇಶದಲ್ಲಿ ಅಧ್ಯಯನ ಮಾಡು ವವರಿಗೆ ಆರ್ಥಿಕ ನೆರವು ಸಿಗಲಿದೆ. ಮಂಗಳ-ಗುರು-ಶುಕ್ರ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 26.05.2024 ರಿಂದ 01.06.2024ರ ವರೆಗೆ - Janathavaniಮೀನಾ ರಾಶಿ : (ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.) 

ನಿಮ್ಮ ದ್ವಂದ್ವ ನೀತಿಯ ನಿಲುವು ಹಲವರಿಗೆ ವಿಚಿತ್ರವಾಗಿ ಕಾಣಲಿದೆ. ಮತ್ತು ಗೊಂದಲವನ್ನುಂಟು ಮಾಡಲಿದೆ. ಸಂಪಾದನೆ ಹೆಚ್ಚಿದಷ್ಟೂ ಖರ್ಚೂ ಹೆಚ್ಚಲಿದೆ. ಅತಿಯಾದ ಭೋಜನ ಕೂಟ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು, ಆಸ್ತಿಗೆ ಸಂಬಂಧಪಟ್ಟವಿಚಾರದಲ್ಲಿ ರಾಜಕಾರಣಿಗಳ ಪ್ರವೇಶ ವಾಗದಂತೆ ಎಚ್ಚರವಹಿಸಿ, ಮಹಿಳೆಯರು ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರದಿಂದಿರುವುದು ಉತ್ತಮ. ದುರ್ಗಾರಾಧನೆ ಮಾಡಿ. ಭಾನು-ಸೋಮ-ಗುರು-ಶುಭ ದಿನಗಳು.


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
ಫೋ. : 94486 66678

error: Content is protected !!