ಎಳೆಹೊಳೆ ಗ್ರಾಮಕ್ಕೆ ಎಸಿ ಭೇಟಿ

ಮಲೇಬೆನ್ನೂರು, ಜು.14- ಎಳೆಹೊಳೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸೀಲ್ ಡೌನ್‌ ಮಾಡಿರುವ ಏರಿಯಾವನ್ನು ಮಂಗಳವಾರ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರು ಪರಿಶೀಲಿಸಿದರು.

ಸೀಲ್ ಡೌನ್ ಮಾಡಿರುವ ಏರಿಯಾದಲ್ಲಿರುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಮತ್ತು ಅವರು ಅನವಶ್ಯಕವಾಗಿ ಹೊರಗಡೆ ಬರದಂತೆ ನೋಡಿಕೊಳ್ಳಿ ಎಂದು ಸ್ಥಳೀಯ ಅಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು.

ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ತಾ.ಪಂ. ಇಒ ಲಕ್ಷ್ಮೀಪತಿ, ಕಂದಾಯ ನಿರೀಕ್ಷಕ ಸಮೀರ್, ಗ್ರಾ.ಪಂ. ಪಿಡಿಒ ಅರವಿಂದ್, ಗ್ರಾಮ ಲೆಕ್ಕಾಧಿಕಾರಿ ದೊಡ್ಡ ಬಸವರಾಜ್ ಮತ್ತಿತರರು ಹಾಜರಿದ್ದರು.

error: Content is protected !!