ಕ್ರಿಕೆಟ್ ಟೂರ್ನಿ ಉದ್ಘಾಟನೆಯಲ್ಲಿ ಹನಗವಾಡಿ ವೀರೇಶ್
ಮಲೇಬೆನ್ನೂರು, ಮಾ.13- ಸ್ಥಳೀಯ ಬಸವೇಶ್ವರ ಬಡಾವಣೆಯಲ್ಲಿ ರಾಕ್ ಕ್ರಿಕೆಟರ್ ವತಿಯಿಂದ ಪ್ರಥಮ ಬಾರಿಗೆ ತಾಲ್ಲೂಕು ಮಟ್ಟದ ಮಿನಿ ಬೌಂಡರಿ ಕ್ರಿಕೆಟ್ ಟೂರ್ನಿಯನ್ನು ಹಮ್ಮಿಕೊಂಡಿದ್ದು, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಹನಗವಾಡಿ ವೀರೇಶ್, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆ, ಕಲೆ, ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೆ ರೋಗ ನಿರೋಧಕ ಶಕ್ತಿ ವೃದ್ಧಿಗೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಕ್ರೀಡಾಂಗಣ ಉದ್ಘಾಟಿಸಿ ಶುಭ ಕೋರಿದರು. ಪುರಸಭೆ ಸದಸ್ಯರಾದ ಜಿ.ಹೆಚ್. ಮಂಜಪ್ಪ, ಪಿ.ಆರ್. ರಾಜು, ಎ.ಕೆ. ಲೋಕೇಶ್, ಆಶ್ರಯ ಸಮಿತಿ ಸದಸ್ಯ ಬಿ. ಚಂದ್ರಪ್ಪ, ಮುಖಂ ಡರಾದ ಪಾನಿಪೂರಿ ರಂಗನಾಥ್, ಐರಣಿ ಮಹೇಶ್ವರಪ್ಪ, ಬಿ. ಮಂಜುನಾಥ್, ದೊರೆ ಮೌನೇಶ್ವರಚಾರಿ, ಜಿ.ಪಿ. ಹನುಮಗೌಡ, ರಾಕ್ ಕ್ರಿಕೆಟರ್ಸ್ನ ಸಂಜು, ಆಕಾಶ್, ಮನೋಜ್, ವೀರೇಶ್ ಹಾಜರಿದ್ದರು.
ಭಾನುವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಶಾಸಕ ಎಸ್. ರಾಮಪ್ಪ, ಮುಖಂಡರಾದ ಬಿ. ವೀರಯ್ಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಿದ್ದಾರೆ.