ಹೊಳೆಸಿರಿಗೆರೆ : ಶಾಲಾ ಮಕ್ಕಳಿಗೆ ಆಹಾರದ ಕಿಟ್ ವಿತರಣೆ

ಮಲೇಬೆನ್ನೂರು, ಏ.5- ಯೂತ್ ಫಾರ್ ಸೇವಾ ಹಾಗೂ ಟೆಕ್ಸಸ್ ಇನ್‌ಸ್ಟ್ರುಮೆಂಟ್ ಕಂಪನಿ ವತಿಯಿಂದ ಹೊಳೆಸಿರಿಗೆರೆ ಗ್ರಾಮದ ಎ.ಕೆ.  ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು  ಎಲ್ಲಾ ಮಕ್ಕಳಿಗೂ ಗುರುವಾರ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಾವ್ಯ, ಉಪಾಧ್ಯಕ್ಷೆ ಚಂದ್ರಕಲಾ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿಜಯ್ ಕುಮಾರ್, ಪತ್ರಕರ್ತರಾದ ವಿಶ್ವನಾಥ್ ಮೈಲಾಳ ಹೊಳೆಸಿರಿಗೆರೆ, ಮಂಜುನಾಥ್ ಜಿ.ಎಂ. ರಾಜನಹಳ್ಳಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ಇಸಿಓ ಅಶೋಕ ಕಾಳೆ, ಮುಖ್ಯಶಿಕ್ಷಕ ಹೆಚ್.ಎಮ್. ಸೋಮಣ್ಣ, ಶಿಕ್ಷಕರಾದ ಪಾಲಾಕ್ಷಪ್ಪ, ಚಂದ್ರಪ್ಪ, ದಾದಾಪೀರ್, ಶಿಕ್ಷಕಿ ಎಂ. ಮಾರಮ್ಮ, ಗ್ರಾಮ ಪಂಚಾಯ್ತಿ ಸದಸ್ಯ ಪ್ರಭು, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ದುರುಗಪ್ಪ ಮಾಳಿಗೇರ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.

error: Content is protected !!