ವೃತ್ತಿ ಪ್ರವೃತ್ತಿ ಡಾ ಬಿ.ಹೆಚ್. ವೀರಪ್ಪನವರ ಅಭಿನಂದನಾ ಗ್ರಂಥ ಲೋಕಾರ್ಪಣೆ

ವೃತ್ತಿ ಪ್ರವೃತ್ತಿ ಡಾ ಬಿ.ಹೆಚ್. ವೀರಪ್ಪನವರ ಅಭಿನಂದನಾ ಗ್ರಂಥ ಲೋಕಾರ್ಪಣೆ

ದಾವಣಗೆರೆ, ಡಿ. 27 – ಇಲ್ಲಿನ ನಿವೃತ್ತ ಶಿಕ್ಷಕ ಹಾಗೂ ಮಾಜಿ ಕಮಾಂಡೆಂಟ್ ಡಾ. ಬಿ.ಹೆಚ್. ವೀರಪ್ಪನವರ ಪುತ್ರಿ ವಿವಾಹ ಸಂಧರ್ಭದ ಆರತಕ್ಷತೆ ಸಮಾರಂಭದಲ್ಲಿ  ಡಾ. ಬಿ.ಹೆಚ್. ವೀರಪ್ಪನವರ ಅಭಿನಂದನಾ ಗ್ರಂಥವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ  ಲಿಂಗರಾಜ  ಬಿಡುಗಡೆ ಮಾಡಿ ದರು‌ . 

ಹಿರಿಯ ಕಲಾವಿದರು ಹಾಗೂ ನಿವೃತ್ತ ಕಮಾಂಡೆಂಟ್ ಮಹಲಿಂಗಪ್ಪ ಅಭಿನಂದನಾ ಗ್ರಂಥ  ಸಂಪಾದನೆಯಲ್ಲಿ ದಾವಣಗೆರೆ ಕಲಾಪರಿಷತ್ತು ಹಾಗೂ ಅಭಿಮಾನಿ ಬಳಗದವರು ಪ್ರಕಟಿಸಿದ್ದರು‌. ಕಾರ್ಯಕ್ರಮದಲ್ಲಿ  ಡಾ. ಸುಜಿತ್ ಕುಮಾರ್ ಉಪಸ್ಥಿತರಿದ್ದರು.

ಶ್ರೀಮತಿ ಸರಸ್ವತಿ ಡಾ. ವೀರಪ್ಪ ಸ್ವಾಗತಿಸಿದರು. ಶ್ರೀಮತಿ ಸುಮತಿ ಜಯಪ್ಪ ನಿರೂಪಿಸಿದರು. ಕೊನೆಯಲ್ಲಿ ಡಾ. ವೀರಪ್ಪ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀಮತಿ ಉಮಾ ಮತ್ತು ಜಗನ್ ಇವರು ಸಂಗೀತ ಕಾರ್ಯಕ್ರಮ  ನಡೆಸಿಕೊಟ್ಟರು.

error: Content is protected !!