ಅಡಿಕೆ ವರ್ತಕರಿಂದ ಮನಮೋಹನ್ ಸಿಂಗ್‌ಗೆ ಶ್ರದ್ಧಾಂಜಲಿ

ಅಡಿಕೆ ವರ್ತಕರಿಂದ  ಮನಮೋಹನ್ ಸಿಂಗ್‌ಗೆ ಶ್ರದ್ಧಾಂಜಲಿ

ದಾವಣಗೆರೆ, ಡಿ. 27-  ನಗರದ ಅಡಿಕೆ ವರ್ತಕರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಟ್ರೇಡರ್ಸ್ ಅಡಿಕೆ ಅಂಗಡಿಯಲ್ಲಿ ಆರ್ಥಿಕ ಸುಧಾರಣೆಯ ಹರಿಕಾರ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

1990ರಲ್ಲಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ  ಹೊಸ ದಿಕ್ಕು ತೋರಿಸಿದ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ಈ ಸಂದರ್ಭದಲ್ಲಿ ರಾಮಗೊಂಡನಹಳ್ಳಿ ಬಸವರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ಕುಕ್ಕುವಾಡದ ಸುರೇಂದ್ರಪ್ಪ, ಬನಶಂಕರಿ ಸದಾನಂದ, ರಾಮಗೊಂಡನಹಳ್ಳಿ ಜಯಣ್ಣ, ಲೋಕಿಕೆರೆ ರವಿಯಣ್ಣ, ಬಾಡದ ಸೋಮಶೇಖರಪ್ಪ, ಬೆಳ್ಳುಳ್ಳಿ ಗುರುಸ್ವಾಮಿ, ಎಸ್.ಎನ್.ಟಿ.ತಿಪ್ಪೇಸ್ವಾಮಿ, ಹೊನ್ನೂರು ಸಂಕಪ್ಪ, ತೊಗಲೇರಿ ಮುರುಗೇಶ್, ವಿಠಲಾಪುರದ ಕಿರಣ್, ಎಂ. ಷಡಕ್ಷರಪ್ಪ ಬೇತೂರು, ಯಲವಟ್ಟಿ ಅಣ್ಣಪ್ಪ, ನಂದಿ, ಸತೀಶ್, ಬನಶಂಕರಿ ಬಸವರಾಜ್, ಇತರರು ಸೇರಿ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

error: Content is protected !!