ದಾವಣಗೆರೆ, ಜ.28- ರಾಷ್ಟ್ರೀಯ ಗೋ ಸೇವಾ ಸಂಘ ಕರ್ನಾಟಕದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಂ.ಡಿ. ಚೈನ್ರಾಜ್, ಉಪಾಧ್ಯಕ್ಷರಾಗಿ ಕಡ್ಲೆಬಾಳು ಬಸವರಾಜ್, ಕಾಶೀಪುರ ಸಿದ್ದೇಶ್, ಸಚಿವರಾಗಿ ಸುರೇಶ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಕೆ.ದೇವರಾಜ್, ಕಾರ್ಯದರ್ಶಿಗಳಾಗಿ ರುದ್ರೇಶ್ ತೆಲಗಿ, ಕೆ.ಜಿ.ಶರತ್, ಪ್ರಭು ಗೊಲ್ಲರಹಳ್ಳಿ, ಖಜಾಂಚಿಯಾಗಿ ಜಿ.ಎಸ್.ಶ್ಯಾಮ್, ಲೆಕ್ಕ ಪರಿಶೋಧಕರಾಗಿ ಕೆ.ಎಸ್.ಕಲ್ಲಪ್ಪ, ಮಾಧ್ಯಮ ಉಸ್ತುವಾರಿಯಾಗಿ ಆರ್.ಎಲ್.ಯೋಗೇಶ, ವಕ್ತಾರರಾಗಿ ಶೇಖರ್ ನಾಯ್ಕ ನೇಮಕಗೊಂಡಿದ್ದಾರೆ.
ಇದಲ್ಲದೆ, ಜಿಲ್ಲೆಯ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ದಾವಣಗೆರೆ ಉತ್ತರದ ತಾಲ್ಲೂಕು ಅಧ್ಯಕ್ಷರಾಗಿ ಗುಡ್ಡಪ್ಪ, ಉಪಾಧ್ಯಕ್ಷರಾಗಿ ವಾಸುದೇವ ಸಾಕ್ರೆ, ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್, ಕಾರ್ಯದರ್ಶಿ ಕೆ. ನಾಗರಾಜ್, ಮಾಧ್ಯಮ ಉಸ್ತುವಾರಿಯಾಗಿ ಕರಿಬಸಯ್ಯ. ದಾವಣಗೆರೆ ಗ್ರಾಮಾಂತರ ಅಧ್ಯಕ್ಷರಾಗಿ ಡಾ|| ಎಂ.ಹೆಚ್. ಶ್ರೀನಿವಾಸ್, ಉಪಾಧ್ಯಕ್ಷರುಗಳಾಗಿ ಕೆ. ರಾಕೇಶ್, ಬಿ.ಸಿ. ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ವೈ.ಟಿ. ರೇವಣ್ಣ, ಕಾರ್ಯದರ್ಶಿ ಆರ್. ಕಲ್ಲೇಶ್, ಸಂಘಟನಾ ಕಾರ್ಯದರ್ಶಿ ಎಂ. ಶ್ರೀನಿವಾಸ್, ಖಜಾಂಚಿ ಎಂ. ಮಲ್ಲಿಕಾರ್ಜುನ್, ಮಾಧ್ಯಮ ಉಸ್ತುವಾರಿ ಅಣಜಿ ಬಸಣ್ಣ.
ಹೊನ್ನಾಳಿ ತಾಲ್ಲೂಕು ಅಧ್ಯಕ್ಷರಾಗಿ ಹಾಲೇಶಪ್ಪ, ಉಪಾಧ್ಯಕ್ಷರಾಗಿ ಡಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಪರಮೇಶ್ವರಪ್ಪ, ಕಾರ್ಯದರ್ಶಿಯಾಗಿ ಬಿ.ಎಸ್. ರಮೇಶ್. ಹರಿಹರ ತಾಲ್ಲೂಕು ಅಧ್ಯಕ್ಷರಾಗಿ ಎಂ. ವಿಲಾಸ್ ಗೌಡ, ಉಪಾಧ್ಯಕ್ಷರಾಗಿ ಬಿ.ಜೆ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ದಿನೇಶ್, ಕಾರ್ಯದರ್ಶಿ ಬಿ.ಎಸ್. ಉಜ್ಜಣ್ಣ (ಉಜ್ಜಿನಪ್ಪ), ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಎನ್. ರಮೇಶ್.
ಚನ್ನಗಿರಿ ತಾಲ್ಲೂಕು ಅಧ್ಯಕ್ಷರಾಗಿ ರಮೇಶ್, ಉಪಾಧ್ಯಕ್ಷರುಗಳಾಗಿ ಎಂ.ಬಿ. ಬಸವಂತಪ್ಪ, ಎಂ. ಮಲ್ಲಿಕಾರ್ಜುನ್, ಪ್ರಧಾನಕಾರ್ಯದರ್ಶಿಯಾಗಿ ಎಸ್. ಜಯದೇವಪ್ಪ, ಕಾರ್ಯದರ್ಶಿಯಾಗಿ ಲೋಕೇಶ್ ನಿಲುಗಲ್ಲು, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಎನ್. ದೇವರಾಜ್, ಖಜಾಂಚಿಯಾಗಿ ಕೆ.ಎಸ್. ಸಂತೋ ಷ್ಕುಮಾರ್ ಇವರುಗಳು ನೇಮಕಗೊಂಡಿದ್ದಾರೆ.
ಸಂಘದ ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಮಾನ್ಸಿಂಗ್, ರಾಷ್ಟ್ರೀಯ ಪೋಷಕರಾದ ಕೃಷ್ಣಾನಂದಜೀ ಮಹಾರಾಜ್, ಮಹಾಪೋಷಕರಾದ ಜಿ. ಕಿಶನ್ ರೆಡ್ಡಿ ಹಾಗೂ ಕೇಂದ್ರ ಮಂತ್ರಿ ಹಾಗೂ ಸಂಘದ ಮಂತ್ರಿಯಾಗಿರುವ ದಿಲೀಪ್ ಧನರಾಜ್ ಗುಪ್ತಾ ಅವರ ಸೂಚನೆಯಂತೆ ಜಿಲ್ಲಾ ಹಾಗೂ ತಾಲೂಕು ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ಟಿ.ಸಿದ್ದಪ್ಪ ತಿಳಿಸಿದ್ದಾರೆ.