ಮೂಲಭೂತ ಹಕ್ಕುಗಳು ಸಂವಿಧಾನದ ಕೊಡುಗೆ

ಕಸಾಪ ಗಣರಾಜ್ಯೋತ್ಸವದಲ್ಲಿ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ

ದಾವಣಗೆರೆ, ಜ. 28- ನಮ್ಮ ದೇಶದ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ. ಇಂದು ನಾವು ಅನುಭವಿಸುತ್ತಿರುವ ಮೂಲಭೂತ ಹಕ್ಕುಗಳು ಸಂವಿಧಾನ ನೀಡಿರುವ ಕೊಡುಗೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ತಿಳಿಸಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಶ್ರೇಷ್ಠ ಸಂವಿಧಾನ ಹೊಂದಲು ಕಾರಣೀ ಕರ್ತರಾದ ಡಾ.ಬಿ.ಆರ್. ಅಂಬೇಡ್ಕರ್ ಆದಿ ಯಾಗಿ ಎಲ್ಲ ಮಹನೀಯರನ್ನು ಗಣರಾಜ್ಯೋ ತ್ಸವ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಪಾಲನೆ ಮಾಡುವುದೇ ಸಂವಿಧಾನಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು  ಕುರ್ಕಿ ಅಭಿಪ್ರಾಯಪಟ್ಟರು. 

ಇತ್ತೀಚಿನ ದಿನಗಳಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅನಾಚಾರ, ಸ್ವೇಚ್ಭಾಚಾರ ಮಿತಿ ಮೀರುತ್ತಿರುವುದು ಪ್ರಜಾಪ್ರಭುತ್ವ, ಸಂವಿಧಾನದ ಆಶಯವನ್ನು ಅಣಕಿಸುವಂತಾಗಿರುವುದು ದುರಂತವಾಗಿದೆ ಎಂದು ಕುರ್ಕಿ ಖೇದ ವ್ಯಕ್ತಪಡಿಸಿದರು. 

ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯೆಪ್ಪ,  ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಸಂತೇಬೆನ್ನೂರು ಸಿರಾಜ್ ಅಹ್ಮದ್, ಪಾಲಾಕ್ಷಪ್ಪ ಗೋಪನಾಳ್, ಬೇತೂರು ಷಡಾಕ್ಷರಪ್ಪ, ಜಿ.ಆರ್. ಷಣ್ಮುಖಪ್ಪ, ಕಸಾಪ ತಾಲ್ಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ, ಪರಮೇಶ್ವರಪ್ಪ ದಾಗಿನಕಟ್ಟೆ, ಸತ್ಯ ಭಾಮ ಮಂಜುನಾಥ್, ವೀಣಾ ಕೃಷ್ಣಮೂರ್ತಿ, ನಾಗವೇಣಿ, ಸುದರ್ಶನ್ ಕುಮಾರ್, ಬಿ.ಎಸ್. ಜಗದೀಶ್, ಭೈರವೇಶ್ವರ, ಕೆ.ಬಿ. ಪರಮೇಶ್ವರಪ್ಪ, ಶಾಮನೂರು ಸಿದ್ದಣ್ಣ, ಕೊರಟಿಕೆರೆ ಡಿ.ಎಂ. ಶಿವಕುಮಾರ್, ಬಿ.ವಿ. ರಾಜಶೇಖರ್, ಎಂ.ಎ. ಶೀತಲ್, ಪರಮೇಶ್ವರಪ್ಪ, ಕೆ.ಪಿ. ಬಸವರಾಜಪ್ಪ, ಸಿ.ಕೆ. ಸಿದ್ದಣ್ಣ, ಎ. ಮಹೇಶ್ವರಪ್ಪ, ಜಿ.ಬಿ. ಸಿದ್ದಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!