ಮಲೇಬೆನ್ನೂರು, ಜ.24- ಇಲ್ಲಿನ ಶ್ರೀ ನಂದಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಜಿಗಳಿಯ ಇಂದೂಧರ್ ಎನ್. ರುದ್ರೇಗೌಡ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹಿಂಡಸಘಟ್ಟಿಯ ಶ್ರೀಮತಿ ಭಾಗ್ಯ ಉದಯಗೌಡ ಅವರು ಅವಿರೋಧವಾಗಿ ಆಯ್ಕೆಯಾದರು. ಹಳ್ಳಿಹಾಳ್ ಹೆಚ್. ವೀರನಗೌಡ ಮತ್ತು ಜಿ.ಬೇವಿನಹಳ್ಳಿಯ ಶ್ರೀಮತಿ ಶೋಭಾ ಬಿ.ಜಿ. ಪಾಲಾಕ್ಷಪ್ಪ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ತೆರವಾಗಿದ್ದವು.
ಅಧ್ಯಕ್ಷ ಸ್ಥಾನಕ್ಕೆ ಇಂದೂಧರ್ ಮತ್ತು ಜಿ. ಬೇವಿನಹಳ್ಳಿಯ ಸಂತೋಷ್ ಪಾಳ್ಯದ್ ಸ್ಪರ್ಧಿಸಿದ್ದರು. ಇಂದೂಧರ್ ಅವರು 10 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಸಂತೋಷ್ 5 ಮತಗಳನ್ನು ಪಡೆದು ಪರಾಭವಗೊಂಡರು.
ಜಗಳೂರು ತಾಲ್ಲೂಕಿನ ಹಿರಿಯ ಲೆಕ್ಕಪರಿಶೋಧಕ ಮಂಜುನಾಥಸ್ವಾಮಿ ಅವರು ಚುನಾವಣಾಧಿಕಾರಿಯಾಗಿಯಾಗಿದ್ದರು. ಸಹಕಾರಿಯ ಕಾರ್ಯದರ್ಶಿ ಹೆಚ್.ಎಂ. ಬಸವರಾಜ್ ಸಹಕರಿಸಿದರು.
ಸಹಕಾರಿ ನಿರ್ದೇಶಕರುಗಳಾದ ಹಳ್ಳಿಹಾಳ್ ಹೆಚ್.ಟಿ. ಶಾಂತನಗೌಡ, ಹೆಚ್.ಟಿ. ಪರಮೇಶ್ವರಪ್ಪ, ಹೆಚ್. ವೀರನಗೌಡ, ಎ.ಕೆ. ತಿಪ್ಪೇಶಪ್ಪ, ಕೊಕ್ಕನೂರಿನ ಕೆ.ಪಿ. ಆಂಜನೇಯ ಪಾಟೀಲ್, ಬಿ.ಹೆಚ್. ರವಿ, ಟಿ. ರಾಮಚಂದ್ರಪ್ಪ, ಆರ್. ನಾಗರಾಜ್, ಜಿಗಳಿಯ ಗೌಡ್ರ ಬಸವರಾಜಪ್ಪ, ಎಂ.ವಿ. ನಾಗರಾಜ್, ಜಿ.ಬೇವಿನಹಳ್ಳಿ ಶೋಭಾ ಪಾಲಾಕ್ಷಪ್ಪ, ಮಲೇಬೆನ್ನೂರಿನ ಎ. ಆರೀಫ್ ಅಲಿ ಈ ವೇಳೆ ಹಾಜರಿದ್ದರು.