ಕುಕ್ಕುವಾಡ: ನೇತಾಜಿ ಜನ್ಮ ದಿನ

ದಾವಣಗೆರೆ, ಜ.24-  ತಾಲ್ಲೂಕು ಕುಕ್ಕುವಾಡದಲ್ಲಿ ಭಾನುವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಕರ ಸಂಘದ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನ ಆಚರಿಸಲಾಯಿತು.

ನೇತಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಕುಕ್ಕುವಾಡ, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದ ಸಂಧಾನ ಪರ ಪಂಥ ಹಾಗೂ ಸಂಧಾನಾತೀತ ಪಂಥಗಳ ಭಿನ್ನ ದಾರಿಗಳ ಬಗ್ಗೆ  ತಿಳಿಸಿದರು.

ಗಾಂಧಿ ಹೋರಾಟ ಹಾಗೂ ಸುಭಾಷ್ ಹೋರಾಟಗಳು ಹೇಗೆ ಬೇರೆಯಾಗಿದ್ದವು. ಸುಭಾಷ್ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಪಾರ್ವರ್ಡ್ ಬ್ಲಾಕ್ ಸಂಘಟನೆ ಕಟ್ಟಿದ ಬಗ್ಗೆ, ಸುಭಾಷ್ ಅವರ ಬಾಲ್ಯ ಜೀವನ, ವಿದ್ಯಾಭ್ಯಾಸ ಮತ್ತು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಬಗ್ಗೆ ಚರ್ಚಿಸಿದರು.

ಈ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚು ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ಅವರನ್ನು ಇಷ್ಟಪಡುತ್ತಿದ್ದಾರೆ. ಅವರ ಮಾರ್ಗ ಅನುಸರಿಸಲು ಉತ್ಸುಕರಾಗಿದ್ದಾರೆ. ಇದೆಲ್ಲಾ ಗಮನಿಸಿದರೆ ಮುಂದೆ ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂಬ ಆಶಾಭಾವನೆ ಮೂಡುತ್ತಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಬ್ಬೀರ್, ಕಾರ್ಯದರ್ಶಿ ರುದ್ರೇಶ್, ಪದಾಧಿಕಾರಿಗಳಾದ ಮಹೇಶ್, ಪ್ರತಾಪ್, ಪರಶುರಾಮ್, ರಾಹುಲ್, ಹನುಮಂತ, ಶಿವಕುಮಾರ್, ನಿಂಗರಾಜ್, ಬಸವರಾಜ  ಇತರರು ಇದ್ದರು.

error: Content is protected !!