ಮಲೇಬೆನ್ನೂರು, ಜ.19- ಯಲವಟ್ಟಿ ಗ್ರಾ.ಪಂ. ಅಧ್ಯಕ್ಷರಾಗಿ ಕಮಲಾಪುರದ ಕೆ.ಬಿ.ರಮೇಶ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಮಲಾಪುರದ ಮಲ್ಲಿಕಾರ್ಜುನಪ್ಪ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಒಟ್ಟು 13 ಸದಸ್ಯರ ಪೈಕಿ 8 ಸದಸ್ಯರು ಹಾಜರಿದ್ದರು. ಐವರು ಗೈರು ಹಾಜರಾಗಿದ್ದರು. ಭದ್ರಾ ನಾಲಾ ನಂ. 4ರ ಎಇಇ ಶಶಿಧರ್ ಚುನಾವಣಾಧಿಕಾರಿಯಾಗಿದ್ದರು. ಗ್ರಾ.ಪಂ. ಪಿಡಿಓ ರಾಮನಗೌಡ ಹಾಜರಿದ್ದರು.
ಚುನಾವಣೆ ನಂತರ ನೂತನ ಅಧ್ಯಕ್ಷರನ್ನು ಗ್ರಾ.ಪಂ. ಮಾಜಿ ಅಧ್ಯಕ್ಷ ಡಿ.ಹೆಚ್.ಚನ್ನಬಸಪ್ಪ, ಮುಖಂಡರಾದ ಜಿ.ಆಂಜನೇಯ, ಎ.ರಾಮಚಂದ್ರಪ್ಪ, ಡಿ.ಹೆಚ್.ಮಹೇಂದ್ರಪ್ಪ, ಕಮಲಾಪುರದ ಬಸವನಗೌಡ, ದೊಡ್ಡ ಬಸಪ್ಪ, ಷಣ್ಮುಖಪ್ಪ ಮತ್ತಿತರರು ಅಭಿನಂದಿಸಿದರು.