ಮಲೇಬೆನ್ನೂರಿನಲ್ಲಿ ಪೌರ ಕಾರ್ಮಿಕರ ದಿನಾಚರಣೆ

ಮಲೇಬೆನ್ನೂರು, ಸೆ.25 – ಇಲ್ಲಿನ ಪುರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ಮಾತನಾಡಿ, ಹೆಮ್ಮಾರಿ ಕೊರೊನಾ ಸೋಂಕು ಹರಡದಂತೆ ಕಳೆದ 6-7 ತಿಂಗಳಿನಿಂದ ನಿರಂತರ ಹೋರಾಟ ಮಾಡುತ್ತಿರುವ ಪೌರ ಕಾರ್ಮಿಕರ ಹಾಗೂ ಪುರಸಭೆಯವರ ಶ್ರಮ ಶ್ಲಾಘನೀಯ ಎಂದರು.

ಉಪ ತಹಶೀಲ್ದಾರ್ ಆರ್.ರವಿ ಮಾತನಾಡಿ ಪೌರ ಕಾರ್ಮಿಕರು ಜೀವಭಯ ತೊರೆದು ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುತ್ತಿದ್ದಾರೆ. ಅವರನ್ನು ಜನ ಗೌರವಿಸ ಬೇಕೆಂದರು.

ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಮಾತ ನಾಡಿ ಕೊರೊನಾ ಸೋಂಕು ಕಾಲಿಟ್ಟ ದಿನದಿಂದಲೂ ಪೌರ ಕಾರ್ಮಿಕರು ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ದಾನಿಗಳು ಸಹ ಪೌರಕಾರ್ಮಿಕರಿಗೆ ನೆರವು ನೀಡಿದ್ದಾರೆ. ಬೆಳಗಿನ ಉಪಹಾರ, ಮಧ್ಯಾಹ್ನದ  ಊಟ ಮತ್ತು ಪುಡ್ ಕಿಟ್‍ಗಳನ್ನು ನೀಡುವ ಮೂಲಕ ಪೌರ ಕಾರ್ಮಿಕರಿಗೆ ಬೆಂಬಲ ನೀಡಿದ್ದಾರೆ ಎಂದರು.

ಹಿರಿಯ ಆರೋಗ್ಯ ಸಹಾಯಕ ಎಂ.ಉರಣ್ಣ ಪುರ ಸಭೆ ಸದಸ್ಯರಾದ ಬಿ.ಸುರೇಶ್, ದಾದಾವಲಿ , ಮಾಸಣಗಿ ಶೇಖರಪ್ಪ, ಯೂಸುಫ್, ಸಾಕಮ್ಮ ರವಿಕುಮಾರ್, ಕೆ.ಜಿ.ಲೋಕೇಶ್, ಫಕೃದ್ದೀನ್ ಅಹಮದ್, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ಪ್ರಭು, ನವೀನ್ ಮತ್ತಿತರರು ಭಾಗವಹಿಸಿದ್ದರು.

error: Content is protected !!