ಹರಿಹರ, ಸೆ.4- ನಗರದಲ್ಲಿ ಇಂದು ಬೆಳಿಗ್ಗೆಯಿಂದ ಸತತವಾಗಿ ಉತ್ತಮವಾದ ಮಳೆ ಬೀಳುತ್ತಿರುವುದ ರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ನಗರದ ರಸ್ತೆಯ ಮಧ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವ ಗುಂಡಿ ಗಳು ಮಳೆ ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ಅಡೆತಡೆಯುಂಟಾಗಿತ್ತು
ಕೆಲ ಬಡಾವಣೆಗಳಲ್ಲಿ ಚರಂಡಿ ಯಲ್ಲಿ ಕಸ ಕಡ್ಡಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಚರಂಡಿ ನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನೀರು ನುಗ್ಗಿತ್ತು. ತಾಲ್ಲೂಕಿನ ಹರಳ ಹಳ್ಳಿ ಗ್ರಾಮದಲ್ಲಿ 3 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿ ಸುಮಾರು 90 ಸಾವಿರ ನಷ್ಟ ಹಾಗೂ ಕೊಮಾರನಹಳ್ಳಿ ಗ್ರಾಮದಲ್ಲಿ ಕಚ್ಚಾ ಮನೆ ಭಾಗಶಃ ಹಾನಿಯಿಂದ 25 ಸಾವಿರ ರೂಪಾಯಿ ಸೇರಿ ಒಟ್ಟು 1 ಲಕ್ಷದ 15 ಸಾವಿರ ರೂಪಾಯಿ ಹಾನಿಯಾಗಿದೆ.
ತಾಲ್ಲೂಕಿನ ಹಲವಾರು ಗ್ರಾಮ ಗಳಲ್ಲಿ ಭತ್ತದ ಗದ್ದೆಗಳು ಜಲಾವೃತ ವಾಗಿದ್ದು, ಜೊತೆಯಲ್ಲಿ ನೂರಾರು ಎಕರೆ ಮೆಕ್ಕೆಜೋಳ ಬೆಳೆಗಳಿಗೆ ಹಾನಿ ಯಾಗಿ ರುವುದರಿಂದ ರೈತರು ಸಂಕ ಷ್ಟದ ಸ್ಥಿತಿ ತಲುಪಿದ್ದಾರೆ. ಸತತವಾಗಿ ಮಳೆ ಬೀಳುವ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿ ರುವುದರಿಂದ ಸಾರ್ವಜನಿಕರು ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.